ಬ್ರೇಕಿಂಗ್ ನ್ಯೂಸ್: ಸಿಕ್ಕಿತು ಮುಳುಗಿದ ಮೊರ್ಗಾನೆಲ್ ಕಂಪೆನಿಯ ವಂಚಕ ದಂಪತಿಯ ಸುಳಿವು !

Update: 2019-06-24 14:48 GMT

ಐಎಂಎ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ನಡುವೆಯೇ ಎಂಟು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಬಾಗಿಲು ಮುಚ್ಚಿದ್ದ ಮೊರ್ಗಾನೆಲ್ ಎಂಬ ಹೂಡಿಕೆ ಕಂಪೆನಿಯ ಸಿಇಒ ಇರ್ಫಾನ್ ಪಾಶಾ ಹಾಗು ಆತನ ಪತ್ನಿ ಫಾತಿಮಾ ಮಕ್ದೂಮ ಅವರು ಖತರ್ ರಾಜಧಾನಿ ದೊಹಾದಲ್ಲಿ  ಹೊಸ ಹೆಸರಲ್ಲಿ ಉದ್ಯೋಗ ನೇಮಕಾತಿ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಐಎಂಎ ನಂತೆಯೇ ಮೊರ್ಗಾನೆಲ್ ಕೂಡ ಹಲಾಲ್ ಲಾಭದ ಹೆಸರಲ್ಲಿ ದೊಡ್ಡ ಸಂಖ್ಯೆಯ ಜನರಿಂದ ಹಣ ಸಂಗ್ರಹಿಸಿ ವಿವಿಧ ಹೆಸರಿನ ಕಂಪೆನಿಗಳನ್ನು ನಡೆಸುತ್ತಿತ್ತು. ಆದರೆ ಸೆಪ್ಟೆಂಬರ್ 2018 ರಲ್ಲಿ ಹಠಾತ್ತನೆ ಬಂದ್ ಆಯಿತು ಮತ್ತು ಕಂಪೆನಿಯ ಮುಖ್ಯಸ್ಥರು ನಾಪತ್ತೆಯಾದರು. ಇದೀಗ ಇವರು ಕ್ರೆಡೆನ್ಷಿಯಾ ಎಚ್ ಆರ್ ಹೆಸರಿನಲ್ಲಿ ದೊಹಾದಲ್ಲಿ ಉದ್ಯೋಗ ನೇಮಕಾತಿ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ ಎಂದು ಬೆಂಗಳೂರು ಮೂಲದ ವೆಬ್ ಸೈಟ್ thecognate.com ವರದಿ ಮಾಡಿದೆ. 

ಮೊರ್ಗಾನೆಲ್ ಕಂಪೆನಿಯಿಂದ ವಂಚನೆ ಆಗಿರುವ ಕುರಿತು ಪ್ರಕರಣ ದಾಖಲಾಗಿದ್ದರೂ ತನಿಖೆಯಲ್ಲಿ ವಿಶೇಷ ಪ್ರಗತಿ ಕಂಡು ಬಂದಿರಲಿಲ್ಲ. ಈ ಬಗ್ಗೆ ಹೂಡಿಕೆದಾರರು ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನೂ ಭೇಟಿಯಾಗಿ ಇರ್ಫಾನ್ ದಂಪತಿಯನ್ನು ಹುಡುಕಿ ಹಣ ಕೊಡಿಸಬೇಕು ಎಂದು ಕೇಳಿಕೊಂಡಿದ್ದರು. ಆದರೆ ವಿಶೇಷ ಪ್ರಯೋಜನ ಆಗಿರಲಿಲ್ಲ. ಈಗ ಇವರಿಬ್ಬರೂ ದೊಹಾದಲ್ಲಿರುವುದು ಖಚಿತವಾಗಿರುವುದರಿಂದ ಪೊಲೀಸರು ಮತ್ತು ಸರಕಾರ ತಕ್ಷಣ ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಇವರನ್ನು ಭಾರತಕ್ಕೆ ಕರೆತರಬೇಕು ಎಂದು ಕಂಪೆನಿಯ ಹೂಡಿಕೆದಾರ ಹಾಗು ಅವರನ್ನು ಕಂಡು ಹಿಡಿಯಲು ಶ್ರಮಿಸಿದ ಸಯ್ಯದ್ ಸೈಫ್ ಹೇಳಿದ್ದಾರೆ. 

thecognate.com ನ ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ 

https://thecognate.com/the-cognate-tracks-down-morgenall-ceo-irfan-pasha-and-his-wife-the-duo-run-a-recruitment-company-in-doha-qatar/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News