ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿಗಳ ಪ್ರಕಟ

Update: 2019-06-25 16:31 GMT

ಬೆಂಗಳೂರು, ಜೂ.25: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2018 ನೆ ಸಾಲಿನ ಗೌರವ ಪ್ರಶಸ್ತಿ ಹಾಗೂ ಅಕಾಡೆಮಿಯ ಬಹುಮಾನಗಳನ್ನು ಪ್ರಕಟಿಸಿದೆ.

ಅಕಾಡೆಮಿಯ 2018 ನೆ ಸಾಲಿನ ಗೌರವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ಕಾಳಪ್ಪ ಬಡಿಗೇರ(ಸಂಪ್ರದಾಯ ಶಿಲ್ಪ), ರಾಮನಗರ ಜಿಲ್ಲೆಯ ಅಶೋಕ ಗುಡಿಗಾರ್(ಸಂಪ್ರದಾಯ ಶಿಲ್ಪ), ವಿಜಯಪುರ ಜಿಲ್ಲೆಯ ಡಾ.ಶಿವಾನಂದ ಎಚ್.ಬಂಟನೂರು(ಸಮಕಾಲೀನ ಶಿಲ್ಪ), ಶಿವಮೊಗ್ಗ ಜಿಲ್ಲೆಯ ಬಿ.ಎನ್.ಜಯರಾಂ(ಸಿಮೆಂಟ್ ಶಿಲ್ಪ) ಹಾಗೂ ಉಡುಪಿ ಜಿಲ್ಲೆಯ ಟಿ.ಎಸ್.ರತ್ನ(ಸಂಪ್ರದಾಯ ಶಿಲ್ಪ) ಆಯ್ಕೆಯಾಗಿದ್ದಾರೆ.

ಅಕಾಡೆಮಿಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2018ಕ್ಕೆ ವಿವಿಧ ಕಡೆಗಳಿಂದ ಬಂದ ಸಾಂಪ್ರದಾಯಿಕ ಮತ್ತು ಸಮಕಾಲೀನ, ಜಾನಪದ ಶೈಲಿಯ ಕಲಾಕೃತಿಗಳಲ್ಲಿ 6 ಶಿಲ್ಪಿಗಳ ಶಿಲ್ಪಕಲಾಕೃತಿಗಳನ್ನು ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಮೈಸೂರು ಜಿಲ್ಲೆಯ ಎಸ್.ನವೀನ್ ಕುಮಾರ್(ಸಮಕಾಲೀನ), ಉತ್ತರ ಕನ್ನಡ ಜಿಲ್ಲೆಯ ಮುಕುಂದ ಎಂ.ಗೌಡ(ಸಮಕಾಲೀನ), ಬಾಗಲಕೋಟೆ ಜಿಲ್ಲೆಯ ದಾನಯ್ಯ ಎಸ್.ಚೌಕಿಮಠ(ಸಮಕಾಲೀನ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಚ್.ಮಧುಸೂದನ್(ಸಮಕಾಲೀನ), ದಕ್ಷಿಣಕನ್ನಡ ಜಿಲ್ಲೆಯ ಎನ್.ಜಯಚಂದ್ರ(ಸಂಪ್ರದಾಯ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಕುಮಾರ್(ಸಂಪ್ರದಾಯ)ಗೆ ನೀಡಲಾಗುತ್ತಿದೆ.

ರಾಮ್‌ಸನ್ಸ್ ಕಲಾ ಪ್ರತಿಷ್ಠಾನ ಮೈಸೂರು ನೀಡುವ ಬಹುಮಾನಕ್ಕೆ ಬಳ್ಳಾರಿ ಜಿಲ್ಲೆಯ ವೀರಾಚಾರಿ(ಸಂಪ್ರದಾಯ), ಕೆ.ಎಸ್.ಆರ್.ಪಿ.ಗಂಗಾಧರ್ ಎಂ.ಬಡಿಗೇರ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಐ.ಸಂದೀಪ್(ಸಂಪ್ರದಾಯ), ಅಜ್ಜಿಹಳ್ಳಿ ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ ಸ್ಮಾರಕ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜಿ.ಎಸ್.ಮೋಹನ್ ಕುಮಾರ್(ಸಂಪ್ರದಾಯ) ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News