ಮೈಸೂರು ರೈಲ್ವೆ ನಿಲ್ದಾಣಕ್ಕೆ ಐಎಸ್‍ಒ ಪ್ರಮಾಣ ಪತ್ರ

Update: 2019-06-25 18:00 GMT

ಮೈಸೂರು,ಜೂ.24: ಮೈಸೂರು ರೈಲ್ವೆ ನಿಲ್ದಾಣವು ಐಎಸ್ ಒ ಪ್ರಮಾಣ ಪತ್ರವನ್ನು ಪಡೆದ ನೈರುತ್ಯ ರೈಲ್ವೆಯ ಮೊದಲ ರೈಲು ನಿಲ್ದಾಣವಾಗಿದ್ದು, ಇತ್ತೀಚೆಗೆ ಪ್ರಮಾಣಪತ್ರ ಸ್ವೀಕರಿಸಿದರು.

ರೈಲ್ವೆ ಮಂಡಳಿಯು ದೇಶಾದ್ಯಂತ 37 ರೈಲ್ವೆ ನಿಲ್ದಾಣಗಳಲ್ಲಿ 'ಇಕೋ ಸ್ಮಾರ್ಟ್' ಮಿಲ್ದಾಣಗಳಾಗಿ ಅಭಿವೃದ್ಧಿಪಡಿಸಲು ಗುರುತಿಸಿದ್ದು, ಮೈಸೂರು ರೈಲ್ವೆ ನಿಲ್ದಾಣವು ಅವುಗಳಲ್ಲಿ ಒಂದಾಗಿದೆ. ದಿ ಎನ್ವಿರಾನ್ಮೆಂಟ್ ಮತ್ತು ಹೌಸ್ ಕೀಪಿಂಗ್ ಮ್ಯಾನೆಂಜ್ ಮೆಂಟ್ ನ ಬ್ರಿಜ್ ಮೋಹನ್ ನೇತೃತ್ವದಲ್ಲಿ ಉಪಕ್ರಮ ತೆಗೆದುಕೊಳ್ಳಲಾಗಿದ್ದು, ಬಹಳ ಕಡಿಮೆ ಸಮಯದಲ್ಲಿ ಸಮಗ್ರ ನಿರ್ವಹಣಾ ವ್ಯವಸ್ಥೆಯ ಪ್ರಮಾಣೀಕರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದು ಐಎಸ್ಒ: 9001 ಗುಣಮಟ್ಟ ನಿರ್ವಹಣಾ ವ್ಯವಸ್ಥೆ, ಐಎಸ್ಒ:14001 ಪರಿಸರ ನಿರ್ವಹಣಾ ವ್ಯವಸ್ಥೆ, ಐಎಸ್ಒ:45001 ಸುರಕ್ಷತಾ ನಿರ್ವಹಣಾ ವ್ಯವಸ್ಥೆಯನ್ನೊಳಗೊಂಡ 3 ಐಎಸ್ಒ ಪ್ರಮಾಣ ಪತ್ರವನ್ನೊಳಗೊಂಡಿದೆ. ಮೈಸೂರು ರೈಲ್ವೆ ನಿಲ್ದಾಣದ ಮೇಲ್ವಿಚಾರಕರ ತಂಡ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ, ಜಾರಿಗೆ ತರುವ ಎಲ್ಲ ಸವಾಲುಗಳನ್ನು ಸ್ವೀಕರಿಸಿದರು. 

ಇತ್ತೀಚೆಗೆ ಚೆನ್ನೈ ಮೂಲದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಯಾದ ಕ್ವೆಸ್ಟ್ ಸರ್ಟಿಫಿಕೇಶನ್ ಲಿಮಿಟೆಡ್ ಐಎಂಎಸ್ ಪ್ರಮಾಣಪತ್ರವನ್ನು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ನೀಡಿದರು. ಇದರೊಂದಿಗೆ ಮೈಸೂರು ರೈಲ್ವೆ ನಿಲ್ದಾಣವು ನೈರುತ್ಯ ರೈಲ್ವೆ ನಿಲ್ದಾಣದಲ್ಲಿಯೇ ಐಎಂಎಸ್ ಪ್ರಮಾಣಪತ್ರವನ್ನು ಪಡೆದ ಮೊದಲ ರೈಲು ನಿಲ್ದಾಣವಾಗಿದ್ದು, ಭಾರತದಲ್ಲಿ ಎರಡನೇ ರೈಲು ನಿಲ್ದಾಣವಾಗಿದೆ. ವಿಭಾಗದ ಹಿರಿಯ ಅಧಿಕಾರಿಗಳು ಇದನ್ನು ದೊಡ್ಡ ಸವಾಲೆಂದು ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆಗೈಯುತ್ತಾರೆ ಎಂದು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ದೇವಸಹಾಯಂ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News