ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡಲು ಸೂಚನೆ

Update: 2019-06-27 14:46 GMT

ಬೆಂಗಳೂರು, ಜೂ.27: ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಗುರುತಿಸಿರುವ ಬೋಧಕ ಹಾಗೂ ಬೋಧಕೇತರ ಬ್ಯಾಕ್‌ಲಾಕ್ ಹುದ್ದೆಗಳನ್ನು ಒಂದು ತಿಂಗಳೊಳಗೆ ಭರ್ತಿ ಮಾಡಬೇಕು. ಇಲ್ಲದಿದ್ದಲ್ಲಿ ಸರಕಾರದ ಅನುದಾನ ತಡೆಯಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಎಚ್ಚರಿಸಿದೆ.

ಇಲಾಖೆ ವ್ಯಾಪ್ತಿಯಲ್ಲಿರುವ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಗುರುತಿಸಲ್ಪಟ್ಟಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಈಗಾಗಲೇ ಸೂಚನೆ ನೀಡಿದ್ದರೂ, ನಿರ್ಲಕ್ಷ ವಹಿಸಿರುವುದು ಸಲ್ಲದು. ಕಾರ್ಯಭಾರವಿದ್ದರೂ ಖಾಲಿ ಹುದ್ದೆ ಇಲ್ಲವೆಂಬ ಸಮಜಾಯಿಷಿ ನೀಡದೇ ತಿಂಗಳೊಳಗೆ ಬಾಕಿ ಉಳಿದ ಬೋಧಕ ಹಾಗೂ ಬೋಧಕೇತರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News