ಖಾಸಗಿ ಬಸ್ ಢಿಕ್ಕಿ: ಬೈಕ್‍ನಲ್ಲಿದ್ದ ಮೂವರಿಗೆ ಗಂಭೀರ ಗಾಯ
Update: 2019-06-30 00:19 IST
ಶಿವಮೊಗ್ಗ, ಜೂ. 29: ಖಾಸಗಿ ಪ್ರಯಾಣಿಕ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನ ಎನ್.ಹೆಚ್. 206 ರಲ್ಲಿ ಶುಕ್ರವಾರ ನಡೆದಿದೆ.
ಆಯನೂರಿನ ನಿವಾಸಿಗಳಾದ ಬೈಕ್ ಸವಾರ ಶಂಕ್ರನಾಯ್ಕ್ (45), ನಿರ್ಮಲಾ (22) ಹಾಗೂ ಶೃತಿ(22) ಗಾಯಗೊಂಡವರೆಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ಬಸ್ ಸಾಗರದಿಂದ ಶಿವಮೊಗ್ಗದೆಡೆಗೆ ಆಗಮಿಸುತ್ತಿತ್ತು. ಓವರ್‍ಟೇಕ್ ಮಾಡಲು ಯತ್ನಿಸಿದ ವೇಳೆ ಎದುರಿನಲ್ಲಿ ಹೋಗುತ್ತಿದ್ದ ಬೈಕ್‍ಗೆ ಬಸ್ ಢಿಕ್ಕಿ ಹೊಡೆದಿದೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.