×
Ad

ರಾಷ್ಟ್ರೀಯ ಪ್ರತಿಭಾ ಟೆನ್ನಿಸ್ ಪಂದ್ಯ: ಕಶ್ಚಿ ಸುನಿಲ್ ದ್ವಿತೀಯ

Update: 2019-06-30 22:00 IST

ಮಂಡ್ಯ, ಜೂ.30: ಅಖಿಲ ಭಾರತ ಟೆನ್ನಿಸ್ ಸಂಸ್ಥೆ ವತಿಯಿಂದ ಬೆಂಗಳೂರಿನ ವೈಟ್‍ಫೀಲ್ಡ್ ನಲ್ಲಿರುವ ಟ್ಯಾಮ್ಸ್ ಅಕಾಡೆಮಿಯಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾ ಟೆನ್ನಿಸ್ ಪಂದ್ಯದ ಹನ್ನೆರಡು ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕಶ್ಚಿ ಸುನಿಲ್ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಪೈನಲ್ ಪಂದ್ಯಾವಳಿಯಲ್ಲಿ ತಮಿಳುನಾಡಿನ ತ್ರಿಚಿಯ ಸಂಜನಾ ಸಿ.ಆರ್. ವಿರುದ್ಧ 3-6, 6-3, 2-6 ಸೆಟ್‍ಗಳಿಂದ ಪರಾಭವಗೊಂಡು ದ್ವಿತೀಯ ಸ್ಥಾನ ಗಳಿಸಿದಳು. ಮಂಡ್ಯದ ಪಿಇಟಿ ಟೆನ್ನಿಸ್ ಸಂಸ್ಥೆಯ ತರಬೇತುದಾರ ಮಂಜುನಾಥ್ ಅವರ ಬಳಿ ಕಶ್ಚಿ ಸುನಿಲ್ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News