ಆದಿತ್ಯನಾಥ್ ಸರಕಾರದ ಆದೇಶ 'ಅಸಾಂವಿಧಾನಿಕ' ಎಂದ ಕೇಂದ್ರ ಸರಕಾರ

Update: 2019-07-02 08:01 GMT

ಹೊಸದಿಲ್ಲಿ, ಜು.2: ಹದಿನೇಳು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ನೀಡುವುದನ್ನು ನಿಲ್ಲಿಸುವಂತೆ ಕೇಂದ್ರ ಇಂದು ಉತ್ತರ ಪ್ರದೇಶ ಸರಕಾರಕ್ಕೆ ಸೂಚನೆ ನೀಡಿದೆ. ರಾಜ್ಯಸಭೆಯಲ್ಲಿ ಈ ಕುರಿತಂತೆ ಮಾತನಾಡಿದ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ತಾವರ್ ಚಂದ್ ಗೆಹ್ಲೋಟ್, ಉತ್ತರ ಪ್ರದೇಶ ಸರಕಾರದ ಕ್ರಮ ‘ಸೂಕ್ತವಾಗಿಲ್ಲ’ ಹಾಗೂ ‘ಅಸಂವಿಧಾನಿಕ’ ಎಂದು ಹೇಳಿದ್ದಾರೆ.

“ಇತರ ಹಿಂದುಳಿದ ವರ್ಗಗಳಿಗೆ ಸೇರಿದವರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಅಧಿಕಾರ ಇರುವುದು ಸಂಸತ್ತಿಗೆ'' ಎಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ ಗೆಹ್ಲೋಟ್, ರಾಜ್ಯ ಸರಕಾರಗಳು ನಿಯಮಾವಳಿಗಳನ್ನು ಪಾಲಿಸಬೇಕು ಎಂದರು.

ಅಲಹಾಬಾದ್ ಹೈಕೋರ್ಟ್ 2017ರಲ್ಲಿ ನೀಡಿದ್ದ ಕೆಲವೊಂದು ಅಭಿಪ್ರಾಯಗಳನ್ನು ಉಲ್ಲೇಖಿಸಿ ಉತ್ತರ ಪ್ರದೇಶ ಸರಕಾರವು 17 ಒಬಿಸಿ ಜಾತಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ‘ಎಲ್ಲಾ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಿ’ ನೀಡುವಂತೆ ಅಧಿಕಾರಿಗಳಿಗೆ ಜೂನ್ 24ರಂದು ಸೂಚಿಸಿತ್ತು.

ಕಶ್ಯಪ್, ರಾಜಭರ್, ಧಿವರ್, ಬಿಂಡ್, ಕುಮ್ಹರ್, ಕಹರ್, ಕೇವತ್, ನಿಶದ್, ಭರ್, ಮಲ್ಲಹ್, ಪ್ರಜಾಪತಿ, ಧಿಮರ್, ಬಥಂ, ತುರ್ಹ, ಗೊಡಿಯಾ, ಮಂಝಿ ಹಾಗೂ ಮಚುವಾ ಒಬಿಸಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರ ನೀಡಿದ ಆದೇಶವನ್ನು ಬಿಎಸ್‍ಪಿ ನಾಯಕಿ ಮಾಯಾವತಿ ಕೂಡ `ಅಸಾಂವಿಧಾನಿಕ' ಎಂದು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News