ದೇವಸ್ಥಾನಕ್ಕೆ ಹಾನಿಯೆಸಗಿದ್ದು ಯಾರೆಂದು ಸರಿಯಾಗಿ ಗೊತ್ತಿಲ್ಲ: ಪಾರ್ಕಿಂಗ್ ಜಗಳದಲ್ಲಿ ಶಾಮೀಲಾಗಿದ್ದ ಸಂಜೀವ್

Update: 2019-07-03 14:01 GMT

ಹೊಸದಿಲ್ಲಿ, ಜು.3: ಕೇಂದ್ರ ದಿಲ್ಲಿಯ ಚಾಂದನಿ ಚೌಕ್ ಪ್ರದೇಶದ ಹೌಝ್ ಖಝಿ ಎಂಬಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಉಂಟಾದ ಕಲಹವು ಅಲ್ಲಿನ ದೇವಸ್ಥಾನವೊಂದರಲ್ಲಿ ದುಷ್ಕರ್ಮಿಗಳು ದಾಂಧಲೆ ನಡೆಸುವುದರೊಂದಿಗೆ ಪರ್ಯಾವಸಾನವಾದ ಘಟನೆಗೆ ಹೊಸ ತಿರುವು ದೊರಕಿದೆ. ಪಾರ್ಕಿಂಗ್ ಜಗಳದಲ್ಲಿ ಶಾಮೀಲಾಗಿದ್ದ ಒಬ್ಬ ವ್ಯಕ್ತಿ  ತನಗೆ ಮಂದಿರವನ್ನು ಯಾವ ಸಮುದಾಯದ ಮಂದಿ ಹಾನಿಗೊಳಿಸಿದ್ದಾರೆಂಬುದು ಸ್ಪಷ್ಟವಾಗಿ ತಿಳಿದಿಲ್ಲ ಎಂದಿದ್ದಾರೆ.

“ಮಂದಿರದ ಮೇಲೆ ದಾಳಿ ನಡೆಸಿದವರು ಮುಸ್ಲಿಮರೇ ಎಂಬುದು ನನಗೆ ತಿಳಿದಿಲ್ಲ. ಮುಸ್ಲಿಮರು ದಾಳಿ ನಡೆಸಿದ್ದಾರೆಂಬುದು ಜನರಿಂದ ಜನರಿಗೆ ಹರಡಿದ ಮಾತು. ಅವರನ್ನು ಗುರುತಿಸಲೂ ನನಗೆ ಸಾಧ್ಯವಿಲ್ಲ'' ಎಂದು ಸಂಜೀವ್ ಕುಮಾರ್ ಎಂಬವರು ಹೇಳಿದ್ದಾರೆ..

ತನ್ನ ಮನೆಯೆದುರು ಒಬ್ಬ ಬೈಕ್  ನಿಲ್ಲಿಸಿದ್ದನ್ನು ಕಂಡು ಅದರ ಮಾಲಕನಿಗೆ ಬೈಕ್ ಬೇರೆಡೆ ನಿಲ್ಲಿಸುವಂತೆ ಹೇಳಿದ್ದೇ ಜಗಳಕ್ಕೆ ಕಾರಣವಾಯಿತೆಂದು ಅವರು ಹೇಳಿದ್ದಾರೆ.

``ಜಗಳಕ್ಕೆ ಮತೀಯ ಬಣ್ಣ ನೀಡುವ ಯಾವುದೇ ಉದ್ದೇಶ ನನಗಿರಲಿಲ್ಲ, ನಾನು ಜಗಳವಾಡಿದ ವ್ಯಕ್ತಿ ಮುಸ್ಲಿಂ ಅಥವಾ ಹಿಂದು ಧರ್ಮದವನೇ ಎಂಬುದೂ ನನಗೆ ತಿಳಿದಿರಲಿಲ್ಲ. ಘಟನೆಗೆ ರಾಜಕಾರಣಿಗಳು ಮತೀಯ ಬಣ್ಣ ನೀಡುತ್ತಿದ್ದಾರೆ'' ಎಂದು ದೂರಿದ ಅವರು ಈ ವಿಚಾರದಲ್ಲಿ ಆಪ್, ಕಾಂಗ್ರೆಸ್, ಬಿಜೆಪಿ ಎಲ್ಲಾ ಪಕ್ಷಗಳೂ ಒಂದೇ ಎಂದೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News