ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ: ದೂರು ದಾಖಲು
Update: 2019-07-03 20:11 IST
ಶಿವಮೊಗ್ಗ, ಜು. 3: ವ್ಯಕ್ತಿಯೋರ್ವರಿಗೆ ಅಪರಿಚಿತ ವ್ಯಕ್ತಿಯು ಕುಖ್ಯಾತ ರೌಡಿಯ ಕಡೆಯವನೆಂದು ಹೇಳಿಕೊಂಡು ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಹಣ ಕೊಡದಿದ್ದರೆ ಕೊಲ್ಲುವ ಬೆದರಿಕೆ ಹಾಕಿದ ಸಂಬಂಧ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.
ಕೆ.ಆರ್.ಪ್ರಕಾಶ್ ದೂರು ದಾಖಲಿಸಿದ ವ್ಯಕ್ತಿ. ಅಪರಿಚಿತ ವ್ಯಕ್ತಿ ತನ್ನನ್ನು ಶಾನ್ಬಾಯಿ ಎಂದು ಹೇಳಿಕೊಂಡು, 'ಹೆಬ್ಬೆಟ್ಟು ಮಂಜಣ್ಣನ ಕಡೆಯವರು ಹೇಳಿದ್ದಾನೆ. ಹಣ ಕೊಟ್ಟು ಸೆಟ್ಲ್ ಮೆಂಟ್ ಮಾಡಿಕೊಂಡರೆ ಚೆನ್ನಾಗಿರುತ್ತೆ. ಇಲ್ಲದಿದ್ದರೆ ನಿಮಗೆ ಹಾಗೂ ನಿಮ್ಮ ಮಗನನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಕೆ.ಆರ್.ಪ್ರಕಾಶ್‍ರವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.