ರಾಜ್ಯ ವಕ್ಫ್ ಮಂಡಳಿ ನಾಮ ನಿರ್ದೇಶನ ನೇಮಕಕ್ಕೆ ಅರ್ಜಿ ಆಹ್ವಾನ

Update: 2019-07-03 17:02 GMT

ಬೆಂಗಳೂರು, ಜು.3: ವಕ್ಫ್ ಕಾಯ್ದೆ-1992 ಹಾಗೂ ವಕ್ಫ್ ತಿದ್ದುಪಡಿ ಕಾಯ್ದೆ-2013ರ ಸೆಕ್ಷನ್ 14(1)ಸಿ ಮತ್ತು ಡಿ ರಲ್ಲಿನ ಅಧಿಕಾರವನ್ನು ಚಲಾಯಿಸಿ ರಾಜ್ಯ ಸರಕಾರ ಈ ಕೆಳಕಂಡ ವರ್ಗದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ನಾಮ ನಿರ್ದೇಶನ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲು ಅಧಿಸೂಚಿಸಿದೆ.

ನಗರ ಯೋಜನೆ ಅಥವಾ ವ್ಯವಹಾರ ನಿರ್ವಹಣೆ, ಸಾಮಾಜಿಕ ಕಾರ್ಯ, ಆರ್ಥಿಕ ಅಥವಾ ಕಂದಾಯ, ಕೃಷಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ವೃತ್ತಿ ಅನುಭವ ಹೊಂದಿರುವ ಒಬ್ಬ ಮುಸ್ಲಿಂ ಅಭ್ಯರ್ಥಿ ನಾಮ ನಿರ್ದೇಶನಗೊಳ್ಳುವ ವ್ಯಕ್ತಿಯಾಗಿದ್ದಾರೆ. ಮಾನ್ಯತೆ ಹೊಂದಿರುವ ಶಿಯಾ ಮತ್ತು ಸುನ್ನಿ ಇಸ್ಲಾಮಿಕ್ ವಿಷಯದ ಬಗ್ಗೆ ವಿದ್ಯಾರ್ಹತೆ ಹೊಂದಿರುವ ತಲಾ ಒಬ್ಬ ಮುಸ್ಲಿಂ ಅಭ್ಯರ್ಥಿ ನಾಮ ನಿರ್ದೇಶನಗೊಳ್ಳುವ ವ್ಯಕ್ತಿಗಳಾಗಿದ್ದಾರೆ. ಅರ್ಹ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳೊಂದಿಗೆ ಸೀಲ್ಡ್ ಕವರ್‌ನಲ್ಲಿ ಸರಕಾರದ ಕಾರ್ಯದರ್ಶಿಗಳು, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ, ಕೊಠಡಿ ಸಂಖ್ಯೆ-204, 2ನೆ ಮಹಡಿ, ವಿಕಾಸಸೌಧ, ಬೆಂಗಳೂರು ಇಲ್ಲಿಗೆ ಕಳುಹಿಸತಕ್ಕದ್ದು. ಅರ್ಜಿ ಸಲ್ಲಿಸಲು ಜು.10, ಸಂಜೆ 5ಗಂಟೆ ಕೊನೆಯ ದಿನವಾಗಿದೆ.

ಹೆಚ್ಚಿನ ವಿವರಕ್ಕೆ 9980584150, 9448430402 ಸಂಪರ್ಕಿಸಬಹುದು ಎಂದು ವಕ್ಫ್ ಇಲಾಖೆ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News