ಅಕ್ರಮ ಎಂ.ಸ್ಯಾಂಡ್ ಸಾಗಾಟ: 3 ಟಿಪ್ಪರ್ ಗಳು ವಶಕ್ಕೆ
Update: 2019-07-04 22:46 IST
ಚಾಮರಾಜನಗರ ಜು.4: ಪರವಾನಗಿ ಇಲ್ಲದೇ ಅಕ್ರಮವಾಗಿ ಎಂ.ಸ್ಯಾಂಡ್ ಸಾಗಾಣಿಕೆ ಮಾಡುತ್ತಿದ್ದ 3 ಟಿಪ್ಪರ್ ಗಳನ್ನು ಗಣಿ ಮತ್ತು ಭೂ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದ ಘಟಣೆ ಗುಂಡ್ಲುಪೇಟೆ ತಾಲೂಕು ತೊಂಡವಾಡಿ ಗ್ರಾಮದಲ್ಲಿ ನಡೆದಿದೆ.
ಗಣಿ ಇಲಾಖೆ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಅವರ ನೇತೃತ್ವದಲ್ಲಿ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಯಾವುದೇ ರಹದಾರಿ ಇಲ್ಲದೆ 3 ಟಿಪ್ಪರ್ ಗಳಲ್ಲಿ ಎಂ.ಸ್ಯಾಂಡ್‍ನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಲಾರಿಗಳನ್ನು ಬೇಗೂರು ಪೊಲೀಸ್ ಠಾಣೆ ವಶಕ್ಕೆ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಭೂವಿಜ್ಞಾನಿಗಳಾದ ಚಂದ್ರಶೇಖರ್, ರೋಹಿತ್ ಹಾಗು ಮೈಸೂರು ಜಂಟಿ ನಿರ್ದೇಶಕ ಕಚೇರಿಯ ತಾಂತ್ರಿಕ ಅಧಿಕಾರಿ ವಿನಯ್ ಎಂ, ವಿದ್ಯಾ ಎಸ್, ಯಶಸ್ವಿನಿ.ಕೆ, ಇಂಜಿನಿಯರ್ ಉಷಾ, ಕೆ.ಪುಟ್ಟಣ್ಣ, ಚಾಲಕ ಮಧುಸೂಧನ್, ಪಾಲ್ಗೊಂಡಿದ್ದರು.