ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಧರಣಿ

Update: 2019-07-05 15:23 GMT

ಚಿಕ್ಕಮಗಳೂರು, ಜು.5: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ನಗರದ ತಾಲೂಕು ಕಚೇರಿಯ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಂದು ಪ್ರತಿಭಟನೆ ನಡೆಸಿದರು.

ಸಂಘಟನೆಯ ರಾಜ್ಯ ಸಮಿತಿಯ ಕರೆಯ ಮೇರೆಗೆ  2ದಿನಗಳ ಕಾಲ ನಡೆಯಲಿರುವ ಚಳುವಳಿಗೆ ಇಂದು ಚಾಲನೆ ನೀಡಿದ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಘೋಷಣೆಗಳ ಮೂಲಕ ಆಗ್ರಹಿಸಿದರು.

ಬೇಡಿಕೆಗಳು
ಅಂಗನವಾಡಿ ಕೇಂದ್ರಗಳನ್ನು ಇಂಗ್ಲೀಷ್ ಕಾನ್ವೆಂಟ್‍ಗಳನ್ನಾಗಿ ಮಾರ್ಪಡಿಸಿ ಎಲ್‍ಕೆಜಿ ಮತ್ತು ಯುಕೆಜಿ ಸ್ಕೂಲ್‍ಗಳನ್ನು ತೆರೆಯಬೇಕು.  
ರಾಜ್ಯದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿವೃತ್ತಿಯಾಗಿದ್ದರೂ, ಅವರಿಗೆ ಕೊಡಬೇಕಾದ ಇಡಿಗಂಟಿನ ಹಣ 50,000 ಮತ್ತು 30,000 ರೂಪಾಯಿಗಳನ್ನು ಹಾಗೂ ಎನ್.ಪಿ.ಎಸ್ ಹಣವನ್ನು ಸಾವಿರಾರು ಜನರಿಗೆ ಕೊಟ್ಟಿಲ್ಲ. ಸರ್ಕಾರ ಕೂಡಲೇ ಕ್ರಮವಹಿಸಬೇಕು.

ಕರ್ನಾಟಕ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೋವಾ ಸರ್ಕಾರ ಕೊಡುತ್ತಿರುವ (ಸರ್ವಿಸ್) ಸೇವಾ ಅವಧಿಯ ಆಧಾರದ ಮೇಲೆ (ಗೌರವಧನ) ಸಂಬಳವನ್ನು ಕೊಡುವಂತೆ ಜಾರಿಗೆ ತರಬೇಕು.

60 ವರ್ಷಕ್ಕೆ ನಿವೃತ್ತಿಯಾಗಿರುವ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಪ್ರತಿ ತಿಂಗಳು 6,000 ಪಿಂಚಣಿಯನ್ನು ಕೊಡಲು ಮುಂಬರುವ ಬಜೆಟ್‍ನಲ್ಲಿ ತಪ್ಪದೇ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಅಧ್ಯಕ್ಷೆ ಜಯಶೇಖರ್, ಕಾರ್ಯದರ್ಶಿ ಮಂಗಳ, ಗೌರವಾಧ್ಯಕ್ಷೆ ಗ್ರೇಟ್ಟಾಫರ್ನಾಂಡೀಸ್, ಸುಮಾ, ಜ್ಯೋತಿ, ಮೀನಾಕ್ಷಿ, ಉದಯಕುಮಾರಿ, ಸವಿತಾ, ರತ್ನ, ಪ್ರೇಮ, ಕುಶಾಲಕುಮಾರಿ, ಅನ್ನಪೂರ್ಣ, ಪುಷ್ಪ, ಫಾಮಿದಾ ಸೇರಿದಂತೆ ನೂರಾರು ಕಾರ್ಯಕರ್ತೆಯರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News