×
Ad

ಐಎಂಎ ವಂಚನೆ ಪ್ರಕರಣ: ಜಿಲ್ಲಾಧಿಕಾರಿ ವಿಜಯಶಂಕರ್ ಮೂರು ದಿನ ಪೊಲೀಸ್ ವಶಕ್ಕೆ

Update: 2019-07-09 20:39 IST

ಬೆಂಗಳೂರು, ಜು.9: ಐಎಂಎ ಸಂಸ್ಥೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್ ಅವರನ್ನು ಜು.12ರವರೆಗೆ ಜಿಲ್ಲಾ ಪ್ರಧಾನ ಸೆಷನ್ಸ್ ಕೋರ್ಟ್ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ. ವಿಜಯಶಂಕರ್ ಅವರನ್ನು ಎಸ್‌ಐಟಿ ಅವರು ಕೋರ್ಟ್‌ಗೆ ಹಾಜರುಪಡಿಸಿದರು. 

ನ್ಯಾಯಾಧೀಶ ಶಿವಶಂಕರ್ ಬಿ. ಅಮರಣ್ಣವರ ಅವರಿದ್ದ ನ್ಯಾಯಪೀಠ, ಜು.12ರವರೆಗೆ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿತು. ಐಎಂಎ ಕಂಪೆನಿ ಮಾಲಕ ಮುಹಮ್ಮದ್ ಮನ್ಸೂರ್ ಪರವಾಗಿ ವರದಿ ನೀಡಲು 1.5 ಕೋಟಿ ರೂ.ಲಂಚ ಪಡೆದ ಆರೋಪದಡಿ ವಿಶೇಷ ತನಿಖಾ ತಂಡ ಸೋಮವಾರ ವಿಜಯ್ ಶಂಕರ್ ಅವರನ್ನು ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News