ಗ್ರಾಮ ವಾಸ್ತವ್ಯ: 89 ಅರ್ಜಿದಾರರಿಗೆ 70.60 ಲಕ್ಷ ರೂ.ನೆರವು
Update: 2019-07-09 22:23 IST
ಬೆಂಗಳೂರು, ಜು. 9: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇತ್ತೀಚೆಗೆ ನಡೆಸಿದ ಗ್ರಾಮ ವಾಸ್ತವ್ಯಗಳ ಸಂದರ್ಭದಲ್ಲಿ ಆರೋಗ್ಯ ಮತ್ತಿತರ ಸಮಸ್ಯೆಗಳ ಕುರಿತು ಸಲ್ಲಿಸಿದ ಅಹವಾಲುಗಳ ಪೈಕಿ 89 ಜನರಿಗೆ ಸಿಎಂ ಪರಿಹಾರ ನಿಧಿಯಿಂದ 70.60 ಲಕ್ಷ ರೂಪಾಯಿ ನೆರವು ನೀಡಲಾಗಿದೆ.
ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ 45 ಅರ್ಜಿದಾರರಿಗೆ 32,70,588 ರೂ., ರಾಯಚೂರು ಜಿಲ್ಲೆಯ ಕರೆಗುಡ್ಡ ಗ್ರಾಮದಲ್ಲಿ 28 ಜನರಿಗೆ 19,94,890 ರೂ.ಹಾಗೂ ಬೀದರ್ ಜಿಲ್ಲೆ ಉಜಳಂಬ ಗ್ರಾಮದಲ್ಲಿ 16 ಜನರಿಗೆ 187,94,557 ರೂ.ನೆರವು ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಜೂರಾತಿ ನೀಡಿದ್ದಾರೆ.
ಈ ಫಲಾನುಭವಿಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಮೂತ್ರಪಿಂಡ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ ಮತ್ತಿತರ ವೈದ್ಯಕೀಯ ಸೌಲಭ್ಯಗಳು ಹಾಗೂ ಆರ್ಥಿಕ ನೆರವು ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.