ಓಡೋಡುತ್ತಾ ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ಆಗಮಿಸಿದ ಅತೃಪ್ತರು

Update: 2019-07-11 12:59 GMT

ಬೆಂಗಳೂರು. ಜು.11: ಮುಂಬೈನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ  ಬಂದಿದ್ದ  ಕಾಂಗ್ರೆಸ್ –ಜೆಡಿಎಸ್  ಪಕ್ಷದ ಅತೃಪ್ತ ಶಾಸಕರು  ಇಂದು ಸಂಜೆ  ಓಡೋಡುತ್ತಾ  ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ಆಗಮಿಸಿದ್ದಾರೆ.

ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ 6 ಗಂಟೆಯ ಮೊದಲು ಸ್ಪೀಕರನ್ನು ಭೇಟಿಯಾಗಬೇಕಿತ್ತು. ಆದರೆ ಅವರು ತಲುಪುವಾಗ ನಿಗದಿತ ಸಮಯಕ್ಕಿಂತ 3ನಿಮಿಷ ತಡವಾಗಿತ್ತು.

ವಿಮಾನ ನಿಲ್ದಾಣದಿಂದ ಬಸ್ ನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಅತೃಪ್ತ ಶಾಸಕರು ಸ್ಪೀಕರ್ ಕಚೇರಿಗೆ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News