ಅತೃಪ್ತ ಜೆಡಿಎಸ್ ಶಾಸಕರು ವಾಪಸಾಗಲಿದ್ದಾರೆ: ಅನಿತಾ ಕುಮಾರಸ್ವಾಮಿ ವಿಶ್ವಾಸ

Update: 2019-07-12 13:51 GMT

ಬೆಂಗಳೂರು, ಜು.12: ರಾಜೀನಾಮೆ ನೀಡಿರುವ ಜೆಡಿಎಸ್ ಶಾಸಕರು ವಾಪಸ್ ಬರುವ ನಿರೀಕ್ಷೆಯಿದೆ. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರಾಮವಾಗಿದ್ದಾರೆ ಎಂದು ಶಾಕಿ ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ರಾಜೀನಾಮೆಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ಮಾಡಿಕೊಂಡಿಲ್ಲ. ರಾಜಕಾರಣದಲ್ಲಿ ಇದೆಲ್ಲ ಸಾಮಾನ್ಯವಾಗಿದ್ದು, ನಾವು 30 ವರ್ಷದ ರಾಜಕೀಯದಲ್ಲಿ ಇದೆಲ್ಲವನ್ನು ನೋಡಿಕೊಂಡು ಬಂದಿದ್ದೇವೆಂದು ಹೇಳಿದರು.

ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಸ್ಪೀಕರ್ ರಮೇಶ್‌ ಕುಮಾರ್ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಶಾಸಕರೊಂದಿಗೆ ವೈಯಕ್ತಿಕವಾಗಿ ಭೇಟಿಯಾಗಿ ಮಾತನಾಡಬೇಕು. ಅವರ ಮಾತಿನಿಂದ ನನಗೆ ಮನವರಿಕೆ ಆಗಬೇಕು. ಆಗ ಮಾತ್ರ ರಾಜೀನಾಮೆ ಸ್ವೀಕರಿಸುತ್ತೇನೆ ಎಂದು ಸ್ಪೀಕರ್ ಖಚಿತ ಪಡಿಸಿದ್ದಾರೆ. ಹೀಗಾಗಿ ರಾಜೀನಾಮೆ ಕೊಟ್ಟಿರುವ ಶಾಸಕರು ಮನಸ್ಸು ಬದಲಾಯಿಸಿಕೊಂಡು ಬರುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ರಾಜಕಾರಣಿಗಳ ಇಂದಿನ ನಡೆಯಿಂದ ಜನತೆಯಿಂದ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಶಾಸಕರಾಗಿ ಆಯ್ಕೆಯಾದ ಮೇಲೆ ಜನರ ಸೇವೆ ಮಾಡಬೇಕು. ಕ್ಷೇತ್ರದ ಜನರಿಗೆ ಸಿಗುವ ರೀತಿ ಇರಬೇಕು. ಆದರೆ, ಗೆದ್ದ ಮೇಲೆ ಅಧಿಕಾರ ಮತ್ತು ಹಣಕ್ಕಾಗಿ ಪಕ್ಷಕ್ಕೂ, ಹೈಕಮಾಂಡ್‌ಗೂ ನಿಷ್ಠೆ ತೋರಿಸದೆ ಪಕ್ಷವನ್ನು ತೊರೆದು ಹೋಗುವುದು ತಪ್ಪು. ಪಕ್ಷ, ರಾಜಕೀಯ ಎಂದರೆ ಸಣ್ಣ-ಪುಟ್ಟ ಸಮಸ್ಯೆ ಇರುತ್ತವೆ. ಅದನ್ನು ಕೂತು ಬಗೆಹರಿಸಿಕೊಳ್ಳಬೇಕೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News