ವೈಶಂಪಾಳ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Update: 2019-07-12 14:24 GMT

ಹನೂರು: ವೈಶಂಪಾಳ್ಯ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಘವಾಗಿದ್ದು ಇತರೆ ಸಂಘಗಳಿಗೆ ಮಾದರಿ ಸಂಘವಾಗಿದೆ ಎಂದು ಚಾಮುಲ್ ಅದ್ಯಕ್ಷ ಸಿ.ಎಸ್ ಗುರುಮಲ್ಲಪ್ಪ ತಿಳಿಸಿದರು.

ಹನೂರು ಸಮೀಪದ ವೈಶಂಪಾಳ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಒಕ್ಕೂಟಕ್ಕೆ ವೈಶಂಪಾಳ್ಯ ಸಂಘದಿಂದ ಹಲವು ವರ್ಷಗಳಿಂದ ಒಂದೇ ಗುಣಮಟ್ಟದ ಹಾಲು ಸಂಗ್ರಹಿಸಿ ನೀಡುತ್ತಿರುವುದು ಸಂಘದ ಹಿರಿಮೆಯಾಗಿದೆ. ಅಲ್ಲದೆ ಇಲ್ಲಿನ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ಅದ್ಯಕ್ಷರು, ಸದಸ್ಯರು, ಮುಖ್ಯಕಾರ್ಯನಿರ್ವಾಹಕ ಸೇರಿ ಇಲ್ಲಿನ ಸಿಬ್ಬಂದಿಗಳು ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಸಂಘದ ಪ್ರಗತಿಗೆ ಹಿಡಿದ ಕೈಗನ್ನಡಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅಲ್ಲದೆ ರೈತರು ಪಶು ಪೋಷಣೆಯಲ್ಲಿ ವೈಜ್ಞಾನಿಕ ಪದ್ದತಿಯನ್ನು ಆಳವಡಿಸಿಕೂಳ್ಳುವುದರ ಜೊತೆಗೆ ಪ್ರಸ್ತುತ ದಿನದಲ್ಲಿ ರಾಸುಗಳ ಆರೋಗ್ಯ ಕಾಪಾಡಿಕೂಳ್ಳಲು ರೋಗ ಪ್ರತಿರೋಧಕ ಶಕ್ತಿ ವೃದ್ದಿಗೆ ಅಗತ್ಯ ಪೋಷಾಕಾಂಶಗಳುಳ್ಳ ಆಹಾರ ನೀಡಬೇಕು ಎಂದು ಹಾಲು ಉತ್ಪಾದಕರಿಗೆ ತಿಳಿಸಿದರು.

ಈ ವೇಳೆ ಕೆಎಂಎಫ್ ಹಾಗೂ ಚಾಮುಲ್ ನಿದೇರ್ಶಕ ನಂಜುಂಡಸ್ವಾಮಿ ಮಾತನಾಡಿ ರೈತರು ಸರ್ಕಾರದಿಂದ ಬರುವ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೂಳ್ಳಬೇಕು ಮತ್ತು ಈ  ಸಂಘಕ್ಕೆ ಉತ್ಪಾದಕರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದಾಗ ಇನ್ನೂ ಉನ್ನತ್ತ ಮಟ್ಟಿಗೆ ಪ್ರಗತಿಯಾಗಲು ಸಾಧ್ಯ ಎಂದರು.

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕರಾದ ಶರತ್ ಮಾತನಾಡಿದರು. ಸಂಘದ ನಿರ್ವಾಹಕರು ಹಾಲು ಉತ್ಪಾದಕರ ಸಹಕಾರ ಸಂಘಗಳ 2018 -19ರ ಆಡಿಟ್ ಆದ ಜಮಾ ಖರ್ಚು, 2019-20 ರ ಅಂದಾಜು ಆಯವ್ಯಯ  ಮಂಡನೆ ಮಾಡಿದರು. ಈ ವರ್ಷದಲ್ಲಿ ನಿವ್ವಳ ಲಾಭ ರೂ. 509562.54 ಬಂದಿರುತ್ತದೆ ಎಂದು ತಿಳಿಸಿದ್ದರಲ್ಲದೆ ಇದೇ ವೇಳೆ ಈ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಹಲವು ಪಾಲಕರಿಗೆ ಬಹುಮಾನ ನೀಡಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಚಾಮುಲ್ ಉಪವ್ಯವಸ್ಥಾಪಕ ಶರತ್,ವಿಸ್ತರಣಾಧಿಕಾರಿ ವೆಂಕಟೇಶ್,ಸಂಘದ ಉಪಾದ್ಯಕ್ಷ ಮೆಹರ್‍ಜಾನ್, ನಿದೇರ್ಶಕರುಗಳು, ಕಾರ್ಯನಿರ್ವಾಹಣಾಧಿಕಾರಿ ಕೆ.ರಾಜಮಣಿ, ಹಾಲು ಪರೀವಿಕ್ಷಕ ಎನ್ ಸೆಲ್ವಂ ಸೇರಿದಂತೆ  ಮುಖಂಡ ಮಹದೇವಸ್ವಾಮಿ ಹಾಗೂ ರೈತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News