ದೇವರ ಆಶೀರ್ವಾದ ಇರುವವರೆಗೂ ಮೈತ್ರಿ ಸರಕಾರಕ್ಕೆ ಏನು ಅಗಲ್ಲ: ಸಚಿವ ಎಚ್.ಡಿ.ರೇವಣ್ಣ

Update: 2019-07-12 16:25 GMT

ಮೈಸೂರು,ಜು.12: ದೇವರ ಆಶೀರ್ವಾದ ಇರುವವರೆಗೂ ಮೈತ್ರಿ ಸರಕಾರಕ್ಕೆ ಏನು ಆಗಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಆಷಾಢ ಮಾಸದ ಎರಡನೇ  ಶುಕ್ರವಾರದ ಹಿನ್ನೆಲೆಯಲ್ಲಿ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವ ಸಚಿವ ಎಚ್.ಡಿ.ರೇವಣ್ಣ ಸರಕಾರ ಉಳಿಸಿಕೊಳ್ಳಲು ಚಾಮುಂಡೇಶ್ವರಿ ಮೊರೆ ಹೋಗಿದ್ದು, ವಿಶೇಷ ಪೂಜೆ ಸಲ್ಲಿಸಿದರು.  ಚಾಮುಂಡಿಯ ಸನ್ನಿಧಿಯಲ್ಲಿ 20 ನಿಮಿಷಗಳ ಕಾಲ ದೇವಿಯ ಪ್ರಾರ್ಥನೆ ನಡೆಸಿದರು. ಕುಮಾರಸ್ವಾಮಿಯವರ ಹೆಸರಲ್ಲಿ ಚಾಮುಂಡೇಶ್ವರಿಗೆ ಸಂಕಲ್ಪ ಮಾಡಿಸಿದರು. ಪೂಜೆ ಸಲ್ಲಿಸಿದ ಬಳಿಕ ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವರ ಆಶೀರ್ವಾದ ಇರುವವರೆಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುತ್ತಾರೆ. ಚಾಮುಂಡೇಶ್ವರಿಯ ಅನುಗ್ರಹ ಕುಮಾರಸ್ವಾಮಿ ಮೇಲಿದೆ ಸದ್ಯಕ್ಕೆ ಸರ್ಕಾರಕ್ಕೆ ಏನು ತೊಂದರೆ ಇಲ್ಲ ಎಂದರು.

ಕುಮಾರಸ್ವಾಮಿಗೆ ಆಧಿಕಾರದ ಅವಶ್ಯಕತೆ ಇಲ್ಲ. ಆದರೆ, ರಾಜ್ಯದ ಜನತೆಗೆ ಕುಮಾರಸ್ವಾಮಿಯವರ ಅವಶ್ಯಕತೆ ಇದೆ. ಇಂದು ಕೂಡ ಸರಕಾರಕ್ಕೆ ಏನು ಆಗಲ್ಲ ಎಂದರು.   

ಸಾ.ರಾ ಮಹೇಶ್ ಬಿಜೆಪಿ ನಾಯಕರನ್ನು ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿ ಜತೆ ಅಧಿಕಾರ ಹಂಚಿಕೊಳ್ಳುವ ಬೆಳವಣಿಗೆ ಸದ್ಯಕ್ಕಿಲ್ಲ. ಇಂದಿನ ಅಧಿವೇಶನ ಕೂಡ ಸುಸೂತ್ರವಾಗಿ ನಡೆಯುತ್ತದೆ. ಇನ್ನು ಮುಂದೆ ಎಲ್ಲವು ದೇವರ ಮಯ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News