ಮೈಸೂರು: ಪತ್ನಿಯನ್ನು ಕೊಲೈಗೈದ ಪತಿಗೆ ಜೀವಾವಧಿ ಶಿಕ್ಷೆ

Update: 2019-07-12 16:31 GMT

ಮೈಸೂರು,ಜು.12: ಮಕ್ಕಳಾಗಿಲ್ಲವೆಂದು ಬೇರೆ ವಿವಾಹವಾಗಲು ಅಡ್ಡಿಪಡಿಸುತ್ತಾಳೆಂದು ಪತ್ನಿಯನ್ನೇ ಕೊಲೆಗೈದ ಪತಿಗೆ ಇಲ್ಲಿನ 5ನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಬೆಟ್ಟದಪುರ ನಿವಾಸಿ ಮಹದೇವ್ ಎಂಬಾತನೇ ಶಿಕ್ಷೆಗೊಳಗಾದ ವ್ಯಕ್ತಿ. ಈತ ಮೊದಲಿನಿಂದಲೂ ಪತ್ನಿಗೆ ಮಕ್ಕಳಾಗಿಲ್ಲ ಎಂದು ಹೊಡೆಯುತ್ತಿದ್ದ. 2016ರ ಜನವರಿ ಒಂದರಂದು ರಾತ್ರಿ ಮಲಗುವಾಗ ಸ್ವಲ್ಪ ವಿಷ ಬೆರೆಸಿ ನೀರು ಕುಡಿಸಿ ತಲೆಯ ಅರ್ಧದಷ್ಟು ಭಾಗ ಕತ್ತರಿಸಿ ಶವವನ್ನು ಮನೆಯ ಹಿಂಭಾಗದ ಉಣ್ಣೆಗುತ್ತಿಯಲ್ಲಿ ಇರಿಸಿದ್ದ.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಜಿ.ಕುರವಟ್ಟಿ ಶಿಕ್ಷೆ ವಿಧಿಸಿದ್ದಾರೆ.

ಪಬ್ಲಿಕ್ ಪ್ರಾಸಿಕ್ಯೂಟರ್ ನಾಗಪ್ಪ ಸಿ.ನಾಕ್ ಮನ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News