ಮೈಸೂರು: ಭಾರತೀಯ ಭಾಷಾ ಸಂಸ್ಥೆಯ ಸ್ವರ್ಣಜಯಂತಿ ಸಮಾರಂಭ

Update: 2019-07-13 08:03 GMT

ಮೈಸೂರು, ಜು.13: ಮಾತೃಭಾಷೆ ಎಲ್ಲರಿಗೂ ಬಹಳ ಮುಖ್ಯ. ಭಾಷೆ ಮತ್ತು ಸಂಸ್ಕೃತಿ ಎರಡೂ ಒಟ್ಟಿಗೆ ಸಾಗಬೇಕು ಎಂದು ಉಪರಾಷ್ಟ್ರಪತಿ ಎಂ‌.ವೆಂಕಯ್ಯನಾಯ್ಡು ಅಭಿಪ್ರಾಯಿಸಿದ್ದಾರೆ.

ನಗರದ ಹುಣಸೂರು ರಸ್ತೆಯಲ್ಲಿರುವ ಭಾರತೀಯ ಭಾಷಾ ಸಂಸ್ಥೆಯ ಸ್ವರ್ಣಜಯಂತಿ ಸಮಾರಂಭದಲ್ಲಿ ಶನಿವಾರ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಈ ದೇಶವನ್ನು ಬ್ರಿಟಿಷರು ಹೆಚ್ಚು ಕಾಲ ಆಳ್ವಿಕೆ ನಡೆಸಿದ್ದರು. ಈ ವೇಳೆ ನಮ್ಮ ದೇಶವನ್ನು ಲೂಟಿಮಾಡಿ ಮೋಸ ಮಾಡಿದರು. ಅವರ ಸಂಸ್ಕೃತಿಯನ್ನು ಹೇರಲು ಪ್ರತಿ ಹಂತದಲ್ಲೂ ಪ್ರಯತ್ನಿಸಿದರು. ಆದರೆ ನಮ್ಮ ದೇಶದ ಜನ ನಮ್ಮ ಭಾಷೆ ಸಂಸ್ಕೃತಿಯನ್ನು ಉಳಿಸಿಕೊಂಡರು. ಅವರಿಗೆ ಧನ್ಯವಾದಗಳು ಎಂದು ಹೇಳಿದರು. 

 ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನಕ್ಕೆ ಉಪ ರಾಷ್ಟ್ರಪತಿಯವರು ಪತ್ನಿ ಉಷಾ ವೆಂಕಯ್ಯ ನಾಯ್ಡು ಜೊತೆ ಭೇಟಿ ನೀಡಿ ದೇವರ ದರ್ಶನ ಪಡೆದರು.

 ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ವಿಶೇಷ ಪೂಜೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News