×
Ad

ವಿರೋಧ ಪಕ್ಷದ ಕಡೆ ಪ್ರತ್ಯೇಕ ಆಸನ ಕಲ್ಪಿಸಲು ಕೋರಿ ಸ್ಪೀಕರ್‌ಗೆ ಪಕ್ಷೇತರ ಶಾಸಕರ ಪತ್ರ

Update: 2019-07-13 17:52 IST

ಬೆಂಗಳೂರು, ಜು.13: ಸದನದೊಳಗೆ ವಿರೋಧ ಪಕ್ಷದ ಕಡೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಕೋರಿ ವಿಧಾನಸಭೆ ಸಭಾಧ್ಯಕ್ಷಕರಿಗೆ ಪಕ್ಷೇತರ ಶಾಸಕರಾದ ಆರ್.ಶಂಕರ್, ಎಚ್.ನಾಗೇಶ್ ಪತ್ರ ಬರೆದಿದ್ದಾರೆ.

ಈ ಇಬ್ಬರು ಶಾಸಕರು, ಮೈತ್ರಿ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಾಸ್ಸು ಪಡೆದಿದ್ದರು. ಅಷ್ಟೇ ಅಲ್ಲದೆ, ಜು.8ಕ್ಕೆ ರಾಜ್ಯಪಾಲರನ್ನು ಭೇಟಿಯಾಗಿ ಇಬ್ಬರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನು ವಾಪಾಸ್ಸು ಪಡೆಯುವ ಪತ್ರವನ್ನು ನೀಡಿದ್ದರು.

ಈಗ ಸಭಾಧ್ಯಕ್ಷ ಆರ್.ರಮೇಶ್ ಕುಮಾರ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು ನಾವು ಆಡಳಿತ ಪಕ್ಷಕ್ಕೆ ನೀಡಿದ ಬೆಂಬಲವನ್ನು ವಾಪಸ್ಸು ಪಡೆದಿದ್ದೇವೆ. ಹೀಗಾಗಿ, ನಮಗೆ ವಿರೋಧ ಪಕ್ಷ ಸದಸ್ಯರ ಕಡೆ ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News