ಸಿಎಂ ಬಹುಮತ ಸಾಬೀತು ಮಾಡುವುದೇ ದೊಡ್ಡ ಪ್ರಶ್ನೆ: ಭಗವಂತ್ ಖೂಬಾ

Update: 2019-07-13 18:51 GMT

ಬೀದರ್, ಜು.13: ಬಹುಮತವಿಲ್ಲದೆ ಅಲ್ಪಮತಕ್ಕೆ ಕುಸಿದಿರುವ ಸರಕಾರದಲ್ಲಿ ಸಿಎಂ ಏನು ಬಹುಮತ ಸಾಬೀತು ಮಾಡುತ್ತಾರೆ ಎಂಬ ದೊಡ್ಡ ಪ್ರಶ್ನೆ ಕಾಡುತ್ತಿದೆ. ಹೀಗಿರುವಾಗ ಮೈತ್ರಿ ಸರಕಾರದಲ್ಲಿ ನಾನು ಸಿಎಂ ಆಗುತ್ತೇನೆ ಎನ್ನುವುದಕ್ಕೆ ಮುಖ್ಯಮಂತ್ರಿಗಳಿಗೆ ಯಾವ ನೈತಿಕತೆಯೂ ಇಲ್ಲಾ ಎಂದು ಸಂಸದ ಭಗವಂತ್ ಖೂಬಾ ವಾಗ್ದಾಳಿ ನಡೆಸಿದ್ದಾರೆ.

ನಗರದ ರಂಗಮಂದಿರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಾಲ್ಗೊಂಡು ಮಾತನಾಡಿದ ಅವರು, ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ಸಿಎಂ ಆಗಬೇಕೆನ್ನುತ್ತಾರೆ. ಇನ್ನು ಕೆಲವರು ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ. ಇದನ್ನು ನೋಡಿದರೆ ಸಮ್ಮಿಶ್ರ ಸರಕಾರದಲ್ಲಿ ಎಷ್ಟು ಗೊಂದಲ ಹಾಗೂ ಸ್ವಾರ್ಥವಿದೆ ಎಂದು ತಿಳಿಯುತ್ತದೆ ಎಂದರು.

ರಾಜ್ಯದ ಏಳಿಗೆಯ ಬಗ್ಗೆ ಎರಡು ಪಕ್ಷಗಳು ಸ್ವಲ್ಪವು ಯೋಚನೆ ಮಾಡುತ್ತಿಲ್ಲ. ಶಾಸಕರ ಅತೃಪ್ತಿಗೆ ಗೌರವ ನೀಡಿ ಸಿಎಂ ರಾಜೀನಾಮೆ ನೀಡಬೇಕು. ರಿವರ್ಸ್ ಆಪರೇಷನ್ ಮಾಡುತ್ತೇನೆ. ಬೇರೆ ಏನೋ ತಂತ್ರಗಾರಿಕೆ ಮಾಡುತ್ತೇನೆ ಎಂದರೆ ರಾಜ್ಯದ ಜನರಿಗೆ ಇದು ಸರಿ ಬರಲ್ಲವೆಂದು ಭಗವಂತ್ ಖೂಬಾ ಮೈತ್ರಿ ಸರಕಾರದ ವಿರುದ್ಧ ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News