ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋರಿ ಸರವಣ ಭವನ ಮಾಲಕ ರಾಜಗೋಪಾಲ್ ಅರ್ಜಿ

Update: 2019-07-15 17:00 GMT

ಚೆನ್ನೈ, ಜು.15: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸರವಣ ಭವನ ಹೋಟೆಲ್ ಮಾಲಕ ಪಿ ರಾಜಗೋಪಾಲ್‌ರನ್ನು ಅಸೌಖ್ಯದ ಕಾರಣ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಅವರ ವಕೀಲರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

 ತನ್ನ ಹೋಟೆಲ್‌ನ ಸಿಬ್ಬಂದಿಯ ಪತ್ನಿಯನ್ನು ಮದುವೆಯಾಗಲು ಬಯಸಿದ್ದ ರಾಜಗೋಪಾಲ್ ಸಿಬಂದಿಯನ್ನು ಕೊಲೆ ಮಾಡಿಸಿದ್ದರು ಎಂದು ಪ್ರಕರಣ ದಾಖಲಾಗಿದ್ದು, ಜುಲೈ 9ರಂದು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ತನಗೆ ಆರೋಗ್ಯದ ಸಮಸ್ಯೆಯಿದೆ ಎಂದು ಅವರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಬಳಿಕ ಅವರನ್ನು ಸ್ಟಾನ್ಲೆ ಆಸ್ಪತ್ರೆಯ ‘ಖೈದಿಗಳ ವಾರ್ಡ್’ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ತಂದೆ ಸೇವಿಸುತ್ತಿದ್ದ ಔಷಧಿಗಳನ್ನು ಆಸ್ಪತ್ರೆಯವರು ಬದಲಾಯಿಸಿದ ಕಾರಣ ಅವರ ಆರೋಗ್ಯಸ್ಥಿತಿ ಹದಗೆಟ್ಟಿದ್ದು, ಜುಲೈ 13ರಂದು ಅವರಿಗೆ ಹೃದಯಾಘಾತವಾಗಿದೆ. ಅವರಿಗೆ ಉತ್ತಮ ಚಿಕಿತ್ಸೆಯ ಅಗತ್ಯವಿರುವುದರಿಂದ ಯಾವುದಾದರೂ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಬೇಕು ಎಂದು ರಾಜಗೋಪಾಲ್ ಪುತ್ರ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News