'ಬ್ರಾಹ್ಮಣ ಅಭಿವೃದ್ಧಿ ಮಂಡಳಿ' ರಚಿಸಿ ಸರಕಾರ ಆದೇಶ

Update: 2019-07-16 17:05 GMT

ಬೆಂಗಳೂರು, ಜು.16: ಬ್ರಾಹ್ಮಣರ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮಾಜದವರಿಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ, ಕಲ್ಯಾಣ ಮತ್ತು ಮೂಲ ಸೌಕರ್ಯಗಳನ್ನು ಒಳಗೊಂಡಂತೆ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶಕ್ಕೆ ‘ಕರ್ನಾಟಕ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ’ಯನ್ನು ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ತೊ.ಚ.ಅನಂತಸುಬ್ಬರಾಯ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ‘ಕರ್ನಾಟಕ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ’ಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ, ಬೆಂಗಳೂರಿನ ಎ.ಎಸ್.ಜಯಸಿಂಹ, ಆರ್.ಲಕ್ಷ್ಮೀಕಾಂತ್, ತುಮಕೂರು ಜಿಲ್ಲೆಯ ಎಲ್.ನಾಗರಾಜ ರಾವ್, ಕಲಬುರಗಿ ಜಿಲ್ಲೆಯ ಕೃಷ್ಣ ಬಿ.ಕುಲಕರ್ಣಿ, ಬಳ್ಳಾರಿ ಜಿಲ್ಲೆಯ ರಘುನಾಥ ಆರ್.ಎನ್., ಹುಬ್ಬಳ್ಳಿಯ ಮದನ್ ಕುಲಕರ್ಣಿ, ಉತ್ತರ ಕನ್ನಡ ಜಿಲ್ಲೆಯ ಮುರಳೀಧರ್ ಪ್ರಭು, ಮೈಸೂರು ಜಿಲ್ಲೆಯ ಡಾ.ಸುಜಾತಾ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೃಷ್ಣಾನಂದ ಚಾತ್ರ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News