ರೈಲಿಗೆ ಸಿಲುಕಿ ವೃದ್ಧ ಸಾವು

Update: 2019-07-17 18:16 GMT

ಬೀರೂರು, ಜು.17: ಅಪರಿಚಿತ ವೃದ್ಧರೊಬ್ಬರು ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಬುಧವಾರ ಪಟ್ಟಣದ ರೈಲು ನಿಲ್ದಾಣದ ಬಳಿ ನಡೆದಿದೆ.

ಮೃತ ವೃದ್ಧರಿಗೆ ಅಂದಾಜು 75 ವರ್ಷ ವಯಸ್ಸಾಗಿದ್ದು, ಕಪ್ಪು ಬಣ್ಣದ ಅಂಗಿ ಮತ್ತು ಕಾಫಿ ಬಣ್ಣದ ಪ್ಯಾಂಟು ಧರಿಸಿದ್ದಾರೆ. ವಾರಸುದಾರರು ಇದ್ದಲ್ಲಿ ಅರಸೀಕೆರೆ ಪೋಲಿಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ರೈಲ್ವೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News