ಅತೃಪ್ತ ಶಾಸಕರು ಸರಕಾರದ ಪರವಾಗಿ ಮತ ಹಾಕಲಿದ್ದಾರೆ: ಡಿ.ಕೆ.ಶಿವಕುಮಾರ್

Update: 2019-07-18 16:41 GMT

ಬೆಂಗಳೂರು, ಜು.18: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಲಿರುವ ವಿಶ್ವಾಸಮತ ಯಾಚನೆಯಲ್ಲಿ ಅತೃಪ್ತ ಶಾಸಕರು ಭಾಗವಹಿಸಿ ಸರಕಾರದ ಪರವಾಗಿ ಮತ ನೀಡಲಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರ್ಯಾರು ಸದಸ್ಯತ್ವ ಕಳೆದುಕೊಳ್ಳೋಕೆ ಇಷ್ಟಪಡಲ್ಲ. ವಿಪ್ ಉಲ್ಲಂಘನೆ ಮಾಡಿದರೆ, ಸದನದಲ್ಲಿ ಭಾಗಿಯಾಗದೇ ಇದ್ದರೆ ಸದಸ್ಯತ್ವ ಕಳೆದುಕೊಳ್ಳುತ್ತೇವೆಂದು ಕಾನೂನಿನಲ್ಲೇ ಹೇಳಲಾಗಿದೆ. ಹೀಗಾಗಿ ಅತೃಪ್ತ ಶಾಸಕರು ಸರಕಾರದ ಪರವಾಗಿ ಮತ ಹಾಕಲಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಅತೃಪ್ತ ಶಾಸಕರೆಲ್ಲರೂ ಮಂತ್ರಿಯಾಗಬೇಕು ಎಂಬ ಆಸೆ ಇಟ್ಟುಕೊಂಡಿರುವವರು. ಅವರಿಗೆ ಸಚಿವ ಸ್ಥಾನ ಕೊಡೋಕೆ ನಾವು ಸಿದ್ಧರಿದ್ದೇವೆ. ಹೀಗಾಗಿ ಅತೃಪ್ತ ಶಾಸಕರು ತಮ್ಮ ರಾಜೀನಾಮೆಯನ್ನು ಹಿಂಪಡೆದು ಅಧಿವೇಶನಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News