ಬಹುಮತ ಸಾಬೀತಿಗೆ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಅಧಿಕಾರವಿಲ್ಲ: ಮಾಜಿ ಸಂಸದ ಉಗ್ರಪ್ಪ

Update: 2019-07-18 16:56 GMT

ಬೆಂಗಳೂರು, ಜು.18: ಸದನ ನಡೆಯುತ್ತಿರುವಾಗ ಆಡಳಿತ ಪಕ್ಷ ಬಹುಮತ ಸಾಬೀತುಪಡಿಸಲು ನಿರ್ದೇಶನ ನೀಡಲು ರಾಜ್ಯಪಾಲರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ನಾಳೆ ಮಧ್ಯಾಹ್ನ1.30ರೊಳಗೆ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಆದೇಶಿಸಿರುವುದು ಸಂವಿಧಾನ ವಿರೋಧಿ ತೀರ್ಮಾನ ಎಂದು ಮಾಜಿ ಸಂಸದ ಉಗ್ರಪ್ಪ ಖಂಡಿಸಿದ್ದಾರೆ.

ಸಂಸತ್ ಅಥವಾ ಅಸೆಂಬ್ಲಿಯ ಯಾವುದೇ ಸದನ ನಡೆಯುತ್ತಿರುವಾಗ ಎಲ್ಲಾ ನಿರ್ಧಾರವನ್ನು ಸ್ಪೀಕರ್ ಮಾತ್ರ ತೆಗೆದು ಕೊಳ್ಳಲು ಸಾಧ್ಯ. ಸುಪ್ರೀಂ ಕೋರ್ಟಿಗೆ ಇಲ್ಲದ ಅಧಿಕಾರ ರಾಜ್ಯಪಾಲರಿಗೆ ನೀಡಿದವರಾರು. ರಾಜ್ಯಪಾಲರದ್ದು ಅತ್ಯಂತ ದುರಾದೃಷ್ಟವಶಾತ್ ತೀರ್ಮಾನ ಎಂದು ಉಗ್ರಪ್ಪ ರಾಜ್ಯಪಾಲರ ತೀರ್ಮಾನವನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News