ರಾಷ್ಟ್ರೀಯ ಪ್ರಶಸ್ತಿಗೆ ರಾಜ್ಯದ ಮೂರು ಗ್ರಾ.ಪಂ ಗಳು ಶಿಫಾರಸ್ಸು

Update: 2019-07-18 18:08 GMT

ಬೆಂಗಳೂರು, ಜು.18: ನರೇಗಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡ ಗ್ರಾಮ ಪಂಚಾಯತ್‌ಗಳಿಗೆ ಕೇಂದ್ರ ಸರಕಾರದಿಂದ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ರಾಜ್ಯದ ಮೂರು ಗ್ರಾಮ ಪಂಚಾಯತ್‌ಗಳ ಹೆಸರು ಶಿಫಾರಸ್ಸು ಮಾಡಲಾಗಿದೆ.

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಬಲೂರು, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹಾಗೂ ದಾವಣಗೆರೆ ಜಿಲ್ಲೆಯ ಬೆಳ್ಳಿಗನೂರು ಗ್ರಾಮ ಪಂಚಾಯತ್‌ಗಳು ಶಿಫಾರಸ್ಸಿಗೆ ಆಯ್ಕೆಯಾಗಿವೆ.

ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಾಗಿ ರಾಜ್ಯದ ಮೂರು ಗ್ರಾಮ ಪಂಚಾಯತ್‌ಗಳು ಮೂರು ತಿಂಗಳ ಅವಧಿಯಲ್ಲಿ ಮಾಡಿದ ಗಮನಾರ್ಹ ಸಾಧನೆ ಕುರಿತು ಕೇಂದ್ರ ಕೇಳಿದ್ದ ಮಾಹಿತಿಯನ್ನು ರಾಜ್ಯ ಸರಕಾರ ಸಲ್ಲಿಸಿತು. ವರದಿ ಅವಲೋಕಿಸಿರುವ ಕೇಂದ್ರ ಸರಕಾರ ಈ ಮೂರು ಗ್ರಾಮ ಪಂಚಾಯತ್‌ಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಶಸ್ತಿಗೆ ಆಯ್ಕೆಗೊಂಡಿರುವ ಗ್ರಾಮ ಪಂಚಾಯತ್‌ಗಳ ವಸ್ತುಸ್ಥಿತಿ ಪರಿಶೀಲಿಸಲು ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಭೇಟಿ ನೀಡಿದ್ದು, ನಾಳೆ(ಜು.19)ವರೆಗೂ ಪರಿಶೀಲನೆ ನಡೆಸಲಿದೆ. ಬಳಿಕ ಈ ತಂಡ ನೀಡುವ ವರದಿಯನ್ನಾಧರಿಸಿ ದಿಲ್ಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News