ವಿಶ್ವಾಸ ಮತಯಾಚನೆ ಸೋಮವಾರಕ್ಕೆ ಮುಂದೂಡಿಕೆ ?

Update: 2019-07-19 13:32 GMT

ಬೆಂಗಳೂರು, ಜು. 19 : ವಿಶ್ವಾಸಮತ ಯಾಚನೆಯ ಕಲಾಪವನ್ನು ಸೋಮವಾರಕ್ಕೆ ಮುಂದೂಡುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ. ಮೈತ್ರಿ ಪಕ್ಷಗಳ ನಾಯಕರು ನಮ್ಮ ಸದಸ್ಯರಿಗೆ ವಿಶ್ವಾಸ ಮತಯಾಚನೆ ಕುರಿತು ಮಾತಾಡಲು ಇನ್ನೂ ಅವಕಾಶ ಸಿಕ್ಕಿಲ್ಲ, ಹಾಗಾಗಿ ಸೋಮವಾರದವರೆಗೆ ಮಾತಾಡಲು ಅವಕಾಶ ಕೊಡಬೇಕು ಎಂದು ಸ್ಪೀಕರ್ ಅವರನ್ನು ಕೇಳಿಕೊಂಡಿದ್ದಾರೆ. 

ಇದನ್ನು ಬಿಜೆಪಿ ವಿರೋಧಿಸಿ ಎಷ್ಟು ತಡವಾದರೂ ವಿಶ್ವಾಸ ಮತಯಾಚನೆಯನ್ನು ಇಂದು ರಾತ್ರಿ ಮುಗಿಸಬೇಕು ಎಂದು ಪಟ್ಟು ಹಿಡಿದಿದೆ. ಈ ಬಗ್ಗೆ ಸ್ಪೀಕರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಇಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಗೊತ್ತಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News