ವಿಶ್ವಾಸ ಮತಯಾಚನೆ ಮುಂದೂಡಿಕೆ: ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು ?

Update: 2019-07-19 16:46 GMT

ಬೆಂಗಳೂರು, ಜು.19: ಇಂದು ಮಧ್ಯಾಹ್ನ 1:30ಕ್ಕೆ ವಿಶ್ವಾಸ ಮತಯಾಚನೆ ನಡೆಸಬೇಕು ಎಂದು ಸಿಎಂಗೆ ಸೂಚಿಸಿದ್ದ ರಾಜ್ಯಪಾಲರ ಸಂದೇಶವನ್ನು ಸರಕಾರ ಮೀರಿದ ಬಳಿಕ ರಾಜ್ಯಪಾಲರು, ವಿಶ್ವಾಸ ಮತ ಯಾಚನೆಯನ್ನು ಸಂಜೆ 6 ಗಂಟೆಯೊಳಗೆ ಮುಗಿಸಬೇಕು ಎಂದು ಮರುವಿಜ್ಞಾಪನೆ ಮಾಡಿದ್ದರು. ಆದರೆ ಚರ್ಚೆ ಮುಗಿಯದ ಕಾರಣ ವಿಶ್ವಾಸ ಮತ ಪ್ರಕ್ರಿಯೆ ನಡೆದಿಲ್ಲ. ಈ ಮೂಲಕ ರಾಜ್ಯಪಾಲರು ನೀಡಿದ್ದ ಎರಡನೇ ಗಡುವನ್ನು ಸರಕಾರ ಮೀರಿತ್ತು.

ಬಳಿಕ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಇದೀಗ ರಾಜ್ಯಪಾಲರ ಮುಂದೆ ಕೆಲವೊಂದು ಆಯ್ಕೆಗಳಿದ್ದು, ಅವು ಇಂತಿವೆ..

ರಾಜ್ಯಪಾಲರ ಮುಂದಿರುವ ಆಯ್ಕೆಗಳು ?

ಬಹುಮತ ಸಾಬೀತುಪಡಿಸಲು ಮುಂದಾಗದಿದ್ದರೆ ಸಮ್ಮಿಶ್ರ ಸರಕಾರ ವಜಾಗೊಳಿಸಬಹುದು.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರ ಗೃಹ ಇಲಾಖೆಗೆ ಶಿಫಾರಸ್ಸು ಸಲ್ಲಿಸಬಹುದು.

ಪರ್ಯಾಯ ಸರಕಾರ ರಚನೆ ಮಾಡಲು ಬಿಜೆಪಿಗೆ ಅವಕಾಶ ಕಲ್ಪಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News