ನೂತನ ಸಂಚಾರಿ ನಿಯಮ ನಾಳೆಯಿಂದ ಜಾರಿ: ಪರಿಷ್ಕೃತ ದಂಡ ವಿಧಿಸಲು ಸಜ್ಜು

Update: 2019-07-19 17:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.19: ನೂತನ ಸಂಚಾರಿ ನಿಯಮಾನುಸಾರ ಇಂದಿನಿಂದ ಪರಿಷ್ಕೃತ ದಂಡ ವಿಧಿಸಲು ಪೊಲೀಸರು ಸಜ್ಜಾಗಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡ ಬೀಳಲಿದೆ.

ಇತ್ತೀಚಿಗೆ ರಾಜ್ಯ ಸಾರಿಗೆ ಇಲಾಖೆ ಪರಿಷ್ಕರಣೆ ಮಾಡಿರುವ ಸಂಚಾರ ನಿಯಮಗಳ ಅನ್ವಯ ಅತಿವೇಗದ ಚಾಲನೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ, ವಿಮೆ ರಹಿತ ವಾಹನ, ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ ಪ್ರಕರಣಗಳಿಗೆ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ.

ಹೊಸ ದಂಡದ ಸಂಬಂಧ ಪೊಲೀಸ್ ಇಲಾಖೆ ಹಲವು ಹಂತದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಗಳ ಹಂತದಲ್ಲಿನ ಆಟೋ, ಕ್ಯಾಬ್, ಬಸ್, ಶಾಲಾ ವಾಹನಗಳು, ಸರಕು ಸಾಕಾಣಿಕೆ ವಾಹನಗಳ ಚಾಲಕರು, ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಜನ ಸಂಪರ್ಕ ಸಭೆಗಳನ್ನು ನಡೆಸಲಾಗಿದೆ. ಅಲ್ಲದೆ, ಕರ ಪತ್ರಗಳ ಮೂಲಕವೂ ಪ್ರಚಾರ ಮಾಡಲಾಗಿದೆ.

ನಗರದ ಹಲವು ಕಡೆಗಳಲ್ಲಿ ಹಿಂದಿನ ದಂಡದ ವಿವರ ಹಾಗೂ ಹೆಚ್ಚಳವಾಗಿರುವ ದಂಡದ ವಿವರವುಳ್ಳ ಫಲಕಗಳು ಸಾರ್ವಜನಿಕರ ಮಾಹಿತಿಗಾಗಿ ಅಳವಡಿಸಲಾಗಿದೆ. ಸಂಚಾರಿ ನಿಮಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ವಾಹನಗಳ ಎಲ್ಲ ದಾಖಲೆಗಳನ್ನು ಸಮರ್ಪಕವಾಗಿ ಕಾಪಾಡಿಕೊಳ್ಳುವಂತೆ ಸೂಚನೆಗಳನ್ನು ನೀಡಲಾಗಿದೆ.

ಪರಿಷ್ಕೃತ ದಂಡದ ವಿವರ:

ಪ್ರಕರಣ-ಪ್ರಸ್ತುತ ದರ-ಪರಿಷ್ಕೃತ ದರ

ಮೊಬೈಲ್ ಬಳಕೆ: 300-1ನೆ ಬಾರಿಗೆ 1 ಸಾವಿರ, 2 ನೆ ಬಾರಿಗೆ 2 ಸಾವಿರ

ಅತಿವೇಗದ ಚಾಲನೆ:100-1 ಸಾವಿರ

ನೋ ಪಾರ್ಕಿಂಗ್:100- 1 ಸಾವಿರ

ವಿಮೆ ಇಲ್ಲದೆ ವಾಹನ ಚಾಲನೆ: 500- 1 ಸಾವಿರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News