ವೃತ್ತಿ ರಂಗಭೂಮಿ ಕೇಂದ್ರದ ವಿಶೇಷಾಧಿಕಾರಿಯಾಗಿ ಗಂಗಾಧರಸ್ವಾಮಿ ನೇಮಕ

Update: 2019-07-21 16:18 GMT

ಬೆಂಗಳೂರು, ಜು.21: ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಉದ್ದೇಶಿತ ವೃತ್ತಿ ರಂಗಭೂಮಿ ಕೇಂದ್ರದ ವಿಶೇಷಾಧಿಕಾರಿಯಾಗಿ ಮೈಸೂರಿನ ಹಿರಿಯ ರಂಗ ನಿರ್ದೇಶಕ ಪಿ.ಗಂಗಾಧರಸ್ವಾಮಿಯನ್ನು ನೇಮಕ ಮಾಡಿದ್ದಾರೆ.

ಮೈಸೂರು, ಧಾರವಾಡ ರಂಗಾಯಣಗಳ ಹುಟ್ಟು ಬೆಳವಣಿಗೆಯಲ್ಲಿ ಅಪಾರ ಶ್ರಮ ಮತ್ತು ಸೇವೆ ಸಲ್ಲಿಸಿದ ಗಂಗಾಧರಸ್ವಾಮಿ ಹಿರಿಯ ರಂಗಕರ್ಮಿಯಾಗಿದ್ದಾರೆ. ಅನೇಕ ನಾಟಕ ಕಂಪನಿಗಳಿಗೆ ವೃತ್ತಿ ನಾಟಕಗಳ ನಿರ್ದೇಶನ ಮಾಡಿರುವ ಅವರು ಪ್ರಯೋಗಶೀಲತೆಯ ಆಧುನಿಕ ರಂಗಭೂಮಿ ಸೇರಿದಂತೆ, ಜನಪದ ರಂಗಭೂಮಿಯ ದೊಡ್ಡಾಟದಲ್ಲೂ ಪರಿಣತಿ ಹೊಂದಿದ್ದಾರೆ.

ಸಮುದಾಯ ರಂಗ ಸಂಘಟನೆಯ ಸ್ಥಾಪಕರಲ್ಲೊಬ್ಬರಾದ ಗಂಗಾಧರಸ್ವಾಮಿ ಎಡ ಮತ್ತು ಪ್ರಜಾಸತ್ತಾತ್ಮಕ ವಿಚಾರಧಾರೆಯುಳ್ಳವರು. ನಟ, ನಿರ್ದೇಶಕ, ನೇಪಥ್ಯ ರಂಗ ಶಿಕ್ಷಕರಾಗಿ ಮೈಸೂರು ರಂಗಾಯಣದಲ್ಲಿ ಬಿ.ವಿ.ಕಾರಂತರೊಂದಿಗೆ ಕೆಲಸ ಮಾಡಿದ ಅನನ್ಯತೆ ಅವರದು.

ಕೊಂಡಜ್ಜಿಯಲ್ಲಿ ಈ ಹಿಂದೆ ಸಮುದಾಯದ ಅನೇಕ ಶಿಬಿರಗಳನ್ನು ನಡೆಸಿ ಕೊಟ್ಟಿರುವ ಅವರು ರಂಗ ಶಿಬಿರಗಳ ಚಕ್ರವರ್ತಿ ಎಂತಲೇ ಹೆಸರಾದವರು. ಕೊಂಡಜ್ಜಿಯ ನೂತನ ವೃತ್ತಿ ರಂಗಭೂಮಿ ಕೇಂದ್ರವನ್ನು, ಪರಂಪರೆ ಮತ್ತು ಪ್ರಯೋಗಶೀಲ ರಂಗ ಚಿಂತನೆಯ ಕೊಂಡಿಯಂತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News