ಶಿವಮೊಗ್ಗ: ಮಾರಾಕಾಸ್ತ್ರಗಳೊಂದಿಗೆ ಓಡಾಡುತ್ತಿದ್ದ 11 ಮಂದಿಯ ಬಂಧನ

Update: 2019-07-21 16:44 GMT

ಶಿವಮೊಗ್ಗ, ಜು. 21: ಮಾರಕಾಸ್ತ್ರಗಳೊಂದಿಗೆ ರಸ್ತೆಗಳಲ್ಲಿ ಓಡಾಡುತ್ತ, ಗಲಾಟೆ ಮಾಡಿಕೊಳ್ಳುತ್ತಿದ್ದ ಎರಡು ಗುಂಪುಗಳ 11 ಜನರನ್ನು ಶಿವಮೊಗ್ಗ ನಗರದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 

ಫರಾಜ್ (24), ಪ್ರತಾಪ್ (23), ರಿಝ್ವಾನ್ ಪಾಷಾ (20), ಇರ್ಬಾಝ್ ಖಾನ್ (21), ಶೇಕ್ ಶಿಕ್ರಾನ್ (20), ಮುಹಮದ್ ಇಮ್ರಾನ್ (20), ಮುಹಮದ್ ಬಿಲಾಲ್ (22), ಸೈಫುಲ್ಲಾ ಖಾನ್ (23), ರೋಷನ್ (22) ಹಾಗೂ ಸಮೀರ್ (19) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. 

ಬಂಧಿತ ಎರಡು ಗುಂಪಿನ ಆರೋಪಿಗಳು ಪರಸ್ಪರ ಗಲಾಟೆ ಮಾಡಿಕೊಂಡು ಕೆ.ಆರ್.ಪುರಂ ರಸ್ತೆ, ಎಂಕೆಕೆ ರಸ್ತೆ, ಮೆಹಬೂಬಗಲ್ಲಿ, ಭರ್ಮಪ್ಪನಗರ ರಸ್ತೆಗಳಲ್ಲಿ ಬಹಿರಂಗವಾಗಿ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದು ಸುತ್ತಾಡುತ್ತಿದ್ದರು ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News