ನಾಳೆ ವಿಚಾರಣೆಗೆ ಬರದಿದ್ದರೆ ಅನರ್ಹತೆಯ ಶಿಕ್ಷೆ: ಅತೃಪ್ತ ಶಾಸಕರಿಗೆ ಸಚಿವ ಡಿಕೆಶಿ ಎಚ್ಚರಿಕೆ

Update: 2019-07-22 18:06 GMT

ಬೆಂಗಳೂರು, ಜು.22: ಬಿಜೆಪಿಯವರು ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ವಿಪ್ ಅನ್ನು ರಾಜಕೀಯ ಪಕ್ಷಗಳು ಜಾರಿ ಮಾಡಬಹುದು ಎಂದು ಸ್ಪೀಕರ್ ನಿರ್ದೇಶನ ನೀಡಿದ್ದಾರೆ. ನಮ್ಮ ನಮ್ಮ ಪಕ್ಷಗಳಿಂದ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೊತೆಗೆ ಅನರ್ಹತೆಯ ಆರ್ಜಿಯನ್ನು ಬೇಗ ಇತ್ಯರ್ಥ ಮಾಡಬೇಕೆಂದು ನಾವು ಸ್ಪೀಕರ್‌ಗೆ ಮನವಿ ಮಾಡಿದ್ದೇವೆ. ಈ ಮಧ್ಯೆ ನಾಳೆ ಸ್ಪೀಕರ್ ಅವರು ಅನರ್ಹತೆ ದೂರಿನ ಹಿನ್ನೆಲೆಯಲ್ಲಿ ಶಾಸಕರ ವಿಚಾರಣೆಗೆ ಕರೆದಿದ್ದಾರೆ ಎಂದರು.

ನಾಳೆ ನೀವು(ಅತೃಪ್ತ ಶಾಸಕರು) ಬರದಿದ್ದರೆ, ಸ್ಪೀಕರ್ ತಮ್ಮ ನಿರ್ಧಾರ ತೆಗೆದುಕೊಳ್ಳಬಹುದು. ನೀವೆಲ್ಲ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿದ್ದೀರಿ. ನಾಳೆ ನೀವು ವಿಚಾರಣೆಗೆ ಬರದಿದ್ದರೆ ಅನರ್ಹತೆಯ ಶಿಕ್ಷೆಗೆ ಗುರಿಯಾಗಬಹುದು ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.

ನಾನು ಶಾಸಕರಿಗೆ ಎಚ್ಚರಿಕೆ ಕೊಡುತ್ತಿಲ್ಲ. ನಮ್ಮ ಶಾಸಕ ಮಿತ್ರರಿಗೆ ತಿಳುವಳಿಕೆ ಕೊಡುತ್ತಿದ್ದೇನೆ. ನಾಳೆ ನಿಮಗೆ ಸ್ಪೀಕರ್ ಅಂತಿಮ ಗಡುವು ಕೊಟ್ಟಿದ್ದಾರೆ. ನೀವು ನಾಳೆ ಬರದಿದ್ದರೆ ಅರ್ನಹತೆ ಆಗುವ ತೀರ್ಮಾನ ಸ್ಪೀಕರ್ ತೆಗೆದುಕೊಳ್ಳಬಹುದು ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News