'ವಿಶ್ವಾಸಮತ' ಕಾಲಮಿತಿ ನಿಗದಿಗೆ ಕೋರಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2019-07-22 18:29 GMT

ಬೆಂಗಳೂರು, ಜು.22: ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಲು ಕಾಲಮಿತಿ ನಿಗದಿಪಡಿಸಲು ಸಭಾಪತಿ ರಮೇಶ್‌ ಕುಮಾರ್‌ಗೆ ನಿರ್ದೇಶಿಸಲು ಕೋರಿ ಹೈಕೋರ್ಟ್ ಪಿಐಎಲ್ ಸಲ್ಲಿಕೆಯಾಗಿದೆ. 

ವಿಜಯನಗರದ ವಕೀಲ ಆರ್.ಆನಂದ್‌ಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಇನ್ನಷ್ಟೇ ಬರಬೇಕಾಗಿದೆ. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರಕಾರ ಅನಗತ್ಯವಾಗಿ ಸದನದಲ್ಲಿ ವಿಶ್ವಾಸಮತ ಸಾಬೀತು ಮಾಡಲು ವಿಳಂಬ ಮಾಡುತ್ತಿದೆ. ಬಹುಮತ ವಿಲ್ಲದಿದ್ದರೂ ಎಚ್‌ಡಿಕೆ ಅವರು ಸಿಎಂ ಆಗಿ ಮುಂದುವರೆದಿದ್ದಾರೆ. ಪದೇ ಪದೇ ವಿಶ್ವಾಸ ಮತ ಯಾಚನೆ ಮಾಡುತ್ತೇನೆ ಎಂದು ಹೇಳಿ ಮಾತು ತಪ್ಪುತ್ತಿದ್ದಾರೆ. ಸಭಾಧ್ಯಕ್ಷ ಕೂಡ ಸರಿಯಾದ ನಿರ್ಧಾರ ತಿಳಿಸದೆ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ, ವಿಶ್ವಾಸಮತ ಮಂಡನೆ ನಿರ್ಣಯದ ವಿಚಾರದಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಇನ್ನಷ್ಟೇ ಅರ್ಜಿ ವಿಚಾರಣೆಗೆ ಬರಬೇಕಾಗಿದೆ.

ಪ್ರತಿವಾದಿಗಳನ್ನಾಗಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ವಿಧಾಸನಭೆ ಸಭಾಪತಿ ರಮೇಶ್‌ ಕುಮಾರ್, ಸಿಎಂ ಎಚ್‌ಡಿಕೆ ಅವರನ್ನು ಅರ್ಜಿಯಲ್ಲಿ ಹೆಸರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News