ಇದು ಪ್ರಜಾಪ್ರಭುತ್ವದ ಗೆಲುವು, ನಾಳೆಯಿಂದ ಅಭಿವೃದ್ಧಿಯ ಪರ್ವ ಆರಂಭ: ಬಿ.ಎಸ್.ಯಡಿಯೂರಪ್ಪ
Update: 2019-07-23 20:02 IST
ಬೆಂಗಳೂರು,ಜು.23: ಇದು ಪ್ರಜಾಪ್ರಭುತ್ವದ ಗೆಲುವು. ನಾಳೆಯಿಂದ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ವಿಶ್ವಾಸಮತ ಯಾಚನೆಯಲ್ಲಿ ಮೈತ್ರಿ ಸರಕಾರ ಸೋಲುಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 14 ತಿಂಗಳ ಕುಮಾರಸ್ವಾಮಿಯ ಅಧಿಕಾರ ಕೊನೆಗೊಂಡಿದೆ. ಇದು ಪ್ರಜಾಪ್ರಭುತ್ವದ ಗೆಲುವು ಎಂದ ಅವರು, ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಬರ ಪರಿಹಾರ ಕಾರ್ಯಗಳಿಗೆ ಆದ್ಯತೆ ಕೊಡುತ್ತೇನೆ ಎಂದು ಹೇಳಿದರು.