ವಿಶ್ವಾಸಮತ ಯಾಚನೆಗೆ ಗೈರಾದ ಶಾಸಕರು ಯಾರೆಲ್ಲಾ...? ಇಲ್ಲಿದೆ ವಿವರ

Update: 2019-07-23 17:48 GMT

ಬೆಂಗಳೂರು, ಜು.23: ವಿಶ್ವಾಸಮತ ಯಾಚನೆ ನಿರ್ಣಯದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ ಹಾಗೂ ಪಕ್ಷೇತರರು ಸೇರಿ ಒಟ್ಟು 17 ಮಂದಿ ಶಾಸಕರು ಗೈರು ಹಾಜರಾಗಿದ್ದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರಾದ ಎಸ್.ಟಿ.ಸೋಮಶೇಖರ್, ಬಿ.ಎ.ಬಸವರಾಜು, ಮುನಿರತ್ನ, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಮಹೇಶ್ ಕಮಟಳ್ಳಿ, ರಮೇಶ್ ಜಾರಕಿಹೊಳಿ, ಪ್ರತಾಪ್‌ಗೌಡ ಪಾಟೀಲ್, ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ರೋಷನ್ ಬೇಗ್ ಹಾಗೂ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಪಾಟೀಲ್, ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿ.ನಾಗೇಂದ್ರ.

ಜೆಡಿಎಸ್ ಶಾಸಕರಾದ ಎಚ್.ವಿಶ್ವನಾಥ್, ನಾರಾಯಣ ಗೌಡ, ಕೆ.ಗೋಪಾಲಯ್ಯ, ಬಿಎಸ್ಪಿ ಶಾಸಕ ಎನ್.ಮಹೇಶ್, ಪಕ್ಷೇತರ ಶಾಸಕರಾದ ಶಂಕರ್ ಹಾಗೂ ನಾಗೇಶ್ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ.

ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರವು ಕಾನೂನು ಹಾಗೂ ಸಂವಿಧಾನದ ರೀತಿಯಲ್ಲಿ ರಚನೆಯಾದ ಸರಕಾರ. ಹಣ ಮತ್ತು ತೋಳ್ಬಲ ಬಳಸಿಕೊಂಡು ಸಂಖ್ಯೆಯ ಲೆಕ್ಕದಲ್ಲಿ ಇಂದು ಗೆದ್ದಿರುವ ಬಿಜೆಪಿ ನೈತಿಕವಾಗಿ ಸೋತಿದೆ. ಸಂಖ್ಯೆಯ ಲೆಕ್ಕದಲ್ಲಿ ನಮ್ಮ ಮೈತ್ರಿ ಸರಕಾರ ಸೋತರೂ, ಅವರ ಮಟ್ಟಕ್ಕೆ ಇಳಿಯದೆ ನೈತಿಕವಾಗಿ ನಾವು ಗೆದ್ದಿವೆ. ಈಗ ನಮ್ಮ ಮನೆ ಸ್ವಚ್ಛವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News