ಸಮಾಜ ಕಲ್ಯಾಣ ಇಲಾಖೆಯಲ್ಲಿ 836 ಮಂದಿ ವರ್ಗಾವಣೆ

Update: 2019-07-23 17:58 GMT

ಬೆಂಗಳೂರು, ಜು.23: ಸಮಾಜ ಕಲ್ಯಾಣ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಿ ಹಾಗೂ ಡಿ ಗ್ರೂಪ್ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆ ತರುವ ಸಲುವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸಿ ನೌಕರರನ್ನು ಕೌನ್ಸಿಲಿಂಗ್ ಮೂಲಕ ಸರಳ ವಿಧಾನದಲ್ಲಿ ವರ್ಗಾವಣೆ ಮಾಡುವ ಎರಡು ದಿನಗಳ ಸಮಾವೇಶವನ್ನು ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿತ್ತು. 

ಇಲಾಖೆಯ ತಾಲೂಕು ಹಾಗೂ ಜಿಲ್ಲಾ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸೇರಿದಂತೆ ವಸತಿ ನಿಲಯಗಳ ವಾರ್ಡನ್‌ಗಳು ಹಾಗೂ ಶಿಕ್ಷಕರಿಗೆ ಆನ್‌ಲೈನ್ ಮೂಲಕ ಮೂರು ಆದ್ಯತೆಗಳ ಮೇಲೆ ಸ್ಥಳ ಕೋರಲು ಅವಕಾಶ ಕಲ್ಪಿಸಲಾಗಿತ್ತು. ನಿನ್ನೆ ಹಾಗೂ ಇಂದು ದೇವರಾಜ ಅರಸು ಭವನಕ್ಕೆ ಅಪೇಕ್ಷಿತರನ್ನು ಕರೆಸಿ, ಅವರು ಕೋರಿದ್ದ ಸ್ಥಳಗಳಿಗೆ ಅಥವಾ ಲಭ್ಯವಿಲ್ಲದ ಸಂದರ್ಭಗಳಲ್ಲಿ ಅವರು ಆಯ್ಕೆ ಮಾಡುವ ಖಾಲಿ ಸ್ಥಳಗಳಿಗೆ ವರ್ಗಾವಣೆ ಮಾಡಿಕೊಡಲಾಯಿತು. ಈ ಪ್ರಕ್ರಿಯೆಯಲ್ಲಿ ಪ್ರತಿ ನೌಕರರ ವರ್ಗಾವಣೆ ಗರಿಷ್ಠ 10 ನಿಮಿಷಗಳಲ್ಲಿ ಮುಕ್ತಾಯಗೊಂಡಿದ್ದು ವಿಶೇಷವಾಗಿತ್ತು.

ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ವಿ.ಅನ್ಬುಕುಮಾರ್ ಎರಡೂ ದಿನ ಸ್ಥಳದಲ್ಲಿದ್ದು, ವರ್ಗಾವಣೆ ಪತ್ರಗಳನ್ನು ನೀಡಿದರು. ಇಲಾಖೆಯ 635 ನೌಕರರು ಆನ್‌ಲೈನ್ ಮೂಲಕ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ದೀರ್ಘ ಕಾಲ ಒಂದೇ ಸ್ಥಳದಲ್ಲಿದ್ದ 201 ಮಂದಿ ಸೇರಿದಂತೆ 836 ಮಂದಿಗೆ ವರ್ಗಾವಣೆ ದೊರೆಯಿತು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News