×
Ad

ಬಂದೂಕು ಪರೀಕ್ಷೆಯ ವೇಳೆ ಗುಂಡು ಸಿಡಿದು ಪೊಲೀಸ್ ಮುಖ್ಯಪೇದೆಗೆ ಗಾಯ

Update: 2019-07-24 18:30 IST

ಚಾಮರಾಜನಗರ, ಜು.24: ಬಂದೂಕು ಪರೀಕ್ಷೆಯ ವೇಳೆ ಗುಂಡು ಸಿಡಿದು ಪೊಲೀಸ್ ಮುಖ್ಯಪೇದೆಯೊಬ್ಬರು ಗಾಯಗೊಂಡಿರುವ ಘಟನೆ ಚಾಮರಾಜನಗರದ ಗಡಿ ಭಾಗದಲ್ಲಿರುವ ತಮಿಳುನಾಡಿನ ತಾಳವಡಿಯ ಚಿಕ್ಕಹಳ್ಳಿಯ ಗ್ರಾಮದ ಸಮೀಪ ನಡೆದಿದೆ. 

ಚಾಮರಾಜನಗರ ಗಡಿ ಭಾಗದಲ್ಲಿರುವ ತಮಿಳುನಾಡಿನ ತಾಳವಾಡಿಯ ಚಿಕ್ಕಹಳ್ಳಿಯಲ್ಲಿ ಪೊಲೀಸ್ ಮುಖ್ಯಪೇದೆ ಪ್ರೇಮಕುಮಾರ್ ಆಕಸ್ಮಿಕ ಗುಂಡು ತಗುಲಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ.

ಪ್ರೇಮಕುಮಾರ್ ತಮಿಳುನಾಡಿನ ಮೀಸಲು ಸಶಸ್ತ್ರ ಪಡೆಯ ಮುಖ್ಯಪೇದೆಯಾಗಿದ್ದು, ತಮಿಳುನಾಡಿನ ಈರೋಡ್ ಜಿಲ್ಲೆಯವರಾಗಿದ್ದಾರೆ. ಅರಣ್ಯ ಇಲಾಖೆಗೆಯ ಬಂದೂಕುಗಳನ್ನು ಆರು ತಿಂಗಳಿಗೊಮ್ಮೆ ಸ್ವಚ್ಚತಾ ಕಾರ್ಯ ಮಾಡುವ ಹೊಣೆ ಶಸಸ್ತ್ರ ಮೀಸಲು ಪಡೆಯದ್ದಾಗಿದೆ. ಹೀಗಾಗಿ ಬುಧವಾರ ಬಂದೂಕು ಪರೀಕ್ಷೆ ಮಾಡುವ ವೇಳೆ ಈ ಅವಘಡ ನಡೆದಿದ್ದು, ಗಾಯಾಳು ಪ್ರೇಮಕುಮಾರ್ ಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರೇಮ್ ಕುಮಾರ್ ಪ್ರಾಣಾಪಯದಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News