ರಾಜ್ಯದಲ್ಲಿ ಶೀಘ್ರ ಸರಕಾರ ರಚನೆಯಾಗದಿದ್ದರೆ ಹಣಕಾಸಿನ ಬಿಕ್ಕಟು ಕಾಣಿಸಿಕೊಳ್ಳಲಿದೆ: ಸ್ಪೀಕರ್ ರಮೇಶ್ ಕುಮಾರ್

Update: 2019-07-25 09:59 GMT

ಬೆಂಗಳೂರು, ಜು.25: ಜುಲೈ ಅಂತ್ಯದೊಳಗೆ ಸರಕಾರ ರಚನೆಯಾಗದೆ ಇದ್ದರೆ ಹಣಕಾಸು ವಿಧೇಯಕ ಪಾಸಾಗದೆ , ಹಣದ ಭಿಕ್ಕಟ್ಟು ಕಾಣಿಸಿಕೊಂಡು  ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಂಭವವಿದೆ ಎಂದು ವಿಧಾನಸಭೆಯ ಸ್ಪೀಕರ್ ರಮೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರಕಾರ ರಚನೆಯಾಗಿ ವಿಧಾನಸಭೆ ಮತ್ತು ವಿಧಾನಪರಿಷತ್ ನಲ್ಲಿ ಬಿಲ್ ಪಾಸಾಗದೆ ಇದ್ದರೆ ಹಣಕಾಸು ವಿಚಾರದಲ್ಲಿ ಸಮಸ್ಯೆ ಎದುರಾಗುವ ಅಪಾಯವಿದೆ. ಸರಕಾರದ ಬೊಕ್ಕಸದಿಂದ ಒಂದು  ರೂಪಾಯಿ ಕೂಡಾ ಡ್ರಾ ಮಾಡಲು ಆಗುವುದಿಲ್ಲ. ಸರಕಾರಿ ನೌಕರರಿಗೆ ಸಂಬಳವಿಲ್ಲದೆ ಒದ್ದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ  ಎಂದರು.

ಹೊಸ ಸರಕಾರ ಜುಲೈ 31ರೊಳಗೆ ರಚನೆಯಾಗಬೇಕು. ಇಲ್ಲದಿದ್ದರೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿದೆ. ಸರಕಾರ ರಚನೆಯಾಗದೆ ಹಣಕಾಸು ವಿಧೇಯಕ ಪಾಸಾಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಮೊದಲ ಬಾರಿ ಸಾಂವಿಧಾನಿಕ ಬಿಕ್ಕಟ್ಟು ಬಂದಿದೆ  ಎಂದರು

ಅತೃಪ್ತ ಶಾಸಕರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದೆ. ಆದರೆ ಅವರು ಬಂದಿಲ್ಲ. ಪದೇ ಪದೇ ಅವರಿಗೆ ನೋಟಿಸ್ ನೀಡಲು ನನಗೆ ಬೇರೆ ಕೆಲಸವಿಲ್ವಾ ಎಂದು ಪ್ರಶ್ನಿಸಿದರು.

ಕಾನೂನು ಮುಂದೆ ಎಲ್ಲರೂ ಸಮಾನರು. ರಾಷ್ಟ್ರಪತಿ,  ಕೂಲಿ ಕೆಲಸ ಮಾಡುವವವರಿಗೂ ಕಾನೂನು ಒಂದೇ.  ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News