ನೀತಿ ಸಂಹಿತೆ ಉಲ್ಲಂಘನೆ ಆರೋಪ: ಪ್ರಕಾಶ್ ರೈ, ಮೇವಾನಿ ವಿಚಾರಣೆಗೆ ಹೈಕೋರ್ಟ್ ತಡೆ

Update: 2019-07-28 16:43 GMT

ಬೆಂಗಳೂರು, ಜು.28: ಕಳೆದ(2018) ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಟ, ರಾಜಕಾರಣಿ ಪ್ರಕಾಶ್ ರೈ ಹಾಗೂ ಗುಜರಾತಿನ ಶಾಸಕ ಜಿಗ್ನೇಶ್ ಮೆವಾನಿ ವಿರುದ್ಧದ ವಿಚಾರಣೆಗೆ ತಡೆ ನೀಡಿದೆ.

ತಮ್ಮ ವಿರುದ್ಧದ ಪ್ರಕರಣ ಮತ್ತು ಚಾರ್ಜ್‌ಶೀಟ್ ಪ್ರಶ್ನಿಸಿ ರೈ, ಮೇವಾನಿ ಮತ್ತು ಇನ್ನಿಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಎಫ್‌ಐಆರ್ ಆಧರಿಸಿ ಚಿಕ್ಕಮಗಳೂರು ಪೊಲೀಸರು 2018ರ ಡಿ.20ರಂದು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಯಾವುದೇ ಅಪರಾಧಗಳನ್ನು ದೂರಿನಲ್ಲಿ ಹೇಳಲಾಗಿಲ್ಲ ಎಂದರು. ಅಂತಹ ಸಂದರ್ಭಗಳಲ್ಲಿ, ವಿಚಾರಣೆಯ ಅಂತಿಮ ಫಲಿತಾಂಶವನ್ನು ತಡೆ ಹಿಡಿಯಲು ಅವಕಾಶವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News