ವಂಚನೆ ಪ್ರಕರಣ: ನೌಹೇರಾ ಶೇಕ್ ಶಿವಮೊಗ್ಗ ಪೊಲೀಸ್ ವಶಕ್ಕೆ ?
Update: 2019-07-28 22:30 IST
ಶಿವಮೊಗ್ಗ, ಜು. 28: ಆನ್‍ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ ಅಧ್ಯಕ್ಷೆ ನೌಹೇರಾ ಶೇಕ್ರನ್ನು ಹೈದರಬಾದ್‍ನಲ್ಲಿ ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಬೆಳಗ್ಗೆ ನುಹೀರಾ ಶೇಕ್‍ರನ್ನು ಶಿವಮೊಗ್ಗಕ್ಕೆ ಕರೆತರುವ ಸಾಧ್ಯತೆಯಿದೆ. ಸೋಮವಾರ ಶಿವಮೊಗ್ಗದ ನ್ಯಾಯಾಲಯಕ್ಕೆ ಅವರನ್ನು ಪೊಲೀಸರು ಹಾಜರುಪಡಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.