ದಕ್ಷಿಣ ಕನ್ನಡ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿ ಅಲಂಗಾರು ಬಾಬುಶೆಟ್ಟಿ ಆಯ್ಕೆ
ಬೆಂಗಳೂರು, ಜು.28: ಪ್ರತಿಷ್ಠಿತ ದಕ್ಷಿಣ ಕನ್ನಡ ಸಾಂಸ್ಕೃತಿಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕೈಗೊಂಡ ನಿರ್ಣಯದಂತೆ 2019-22ರ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದ್ದು, ಅಲಂಗಾರು ಬಾಬುಶೆಟ್ಟಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜು.14ರಂದು ಯಲಹಂಕ ಉಪನಗರದ ಕೇಂದ್ರ ಕಚೇರಿಯಲ್ಲಿ ವಾರ್ಷಿಕ ಮಹಾಸಭೆ ನಡೆಸಿದ ಬಳಿಕ ಒಮ್ಮತದ ತೀರ್ಮಾನದಂತೆ ಪ್ರಧಾನ ಕಾರ್ಯದರ್ಶಿಯಾಗಿ ಬಿ.ರಘುನಾಥ ರೈ, ಕೋಶಾಧ್ಯಕ್ಷರಾಗಿ ಅಲಂಗಾರು ಜಯರಾಮ ಶೆಟ್ಟಿ, ಉಪಾಧ್ಯಕ್ಷರಾಗಿ ಹರೀಶ್ ಶೆಟ್ಟಿಯನ್ನು ಆಯ್ಕೆ ಮಾಡಲಾಗಿದೆ.
ಮಹಿಳಾ ಉಪಾಧ್ಯಕ್ಷೆ ಮಲ್ಲಿಕಾ ಎಲ್.ಎನ್.ಆಳ್ವ, ಜಂಟಿ ಕಾರ್ಯದರ್ಶಿ ಪ್ರದೀಪ್ ಧರ್ಮಸ್ಥಳ, ಸಂಘಟನಾ ಕಾರ್ಯದರ್ಶಿ ಕಾಶೀನಾಥ್ ರೈ, ಸಾಂಸ್ಕೃತಿಕ ಕಾರ್ಯದರ್ಶಿ ಕೆ. ಸತೀಶ್ ಶೆಟ್ಟಿ, ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿ ಚಿತ್ರಕಲಾ ಪದ್ಮನಾಭ, ಆಂತರಿಕ ಲೆಕ್ಕ ಪರಿಶೋಧಕ ಬಿಳಿಯಾರು ಕೇಶವ ಆಚಾರ್‌ನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕಾರಣಿ ಮಂಡಳಿ ಸದಸ್ಯರಾಗಿ,ರತನ್ ಕುಮಾರ್ ಹೆಗ್ಡೆ, ಅರವಿಂದ ರಾವ್ ಟಿ, ಸುನಿಲ್ ಕೋಟ್ಯಾನ್, ಸುಜಿತ್ ಶೆಟ್ಟಿ (ಪ್ರಚಾರ ಸಮಿತಿ), ವಿಶ್ವನಾಥ ಶೆಟ್ಟಿ ( ಕ್ರೀಡಾ ಸಮಿತಿ), ಸಾಯಿ ದೀಪಕ್ (ಕ್ರೀಡಾ ಸಮಿತಿ), ಪ್ರಜ್ಞಾ ರಾಜ್ (ಕ್ರೀಡಾ ಸಮಿತಿ)ಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.