ಸಿದ್ಧಾರ್ಥ ನಿಗೂಢ ಸಾವಿನ ಕುರಿತು ಪ್ರಾಮಾಣಿಕ ತನಿಖೆ ನಡೆಯಬೇಕು: ಎಸ್.ಆರ್.ಹಿರೇಮಠ

Update: 2019-07-31 17:06 GMT

ಹುಬ್ಬಳ್ಳಿ, ಜು.31: ನಿಗೂಢವಾಗಿ ಕಾಣೆಯಾಗಿ, ಶವವಾಗಿ ಪತ್ತೆಯಾಗಿರುವ ವಿ.ಜಿ.ಸಿದ್ದಾರ್ಥ ಡಾರ್ಕ್ ಫೈಬರ್ ಮತ್ತು ಕೊ-ಲೊಕೇಶನ್ ಎಂಬ ಹಗರಣಗಳಲ್ಲಿ ಭಾಗಿಯಾಗಿದ್ದರು. ರಾಜಕಾರಣಿಯೊಬ್ಬರು ಅವರಿಗೆ ಕಿರುಕುಳ ನೀಡುತ್ತಿದ್ದರು ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್ ಹಿರೇಮಠ ಹೇಳಿದ್ದಾರೆ. 

ಹುಬ್ಬಳ್ಳಿ ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾರ್ಕ್ ಫೈಬರ್ ಮತ್ತು ಕೊ-ಲೊಕೇಶನ್ ಎಂಬ ಹಗರಣದಲ್ಲಿ ಸಿದ್ದಾರ್ಥ ಅವರು ಭಾಗಿಯಾಗಿದ್ದರು. ಸಿಂಗಪೂರ ಹಾಗೂ ಹಾಂಕಾಂಗ್‌ನಲ್ಲಿರುವ ಅಲ್ಫಾಗ್ರಾಫ್ ಕಂಪನಿಗಳಲ್ಲಿ ದೊಡ್ಡ ಹಗರಣಗಳು ನಡೆದಿವೆ. ಈ ಹಗರಣದಲ್ಲಿ ಸಿದ್ಧಾರ್ಥ ಭಾಗಿ ಆಗಿರುವ ಅನುಮಾನ ತನಿಖಾ ಸಂಸ್ಥೆ ವ್ಯಕ್ತಪಡಿಸಿದೆ. ಇದರ ಜತೆಗೆ ಒಬ್ಬ ರಾಜಕಾರಣಿಯೂ ಅವರಿಗೆ ಕಿರುಕುಳ ನೀಡಿದ್ದಾರೆ. ಅವರ ಹೆಸರನ್ನು ನಾನು ಈಗ ಬಹಿರಂಗ ಪಡಿಸಲಾರೆ ಎಂದು ತಿಳಿಸಿದ್ದಾರೆ.

ಸಿದ್ಧಾರ್ಥ ಅವರ ನಿಗೂಢ ಸಾವಿನ ಕುರಿತು ಪ್ರಾಮಾಣಿಕ ತನಿಖೆ ನಡೆಸಬೇಕು. ಅವರು ಸಾವಿಗೂ ಮೊದಲು ಬರೆದ ಪತ್ರದಲ್ಲಿ ಸತ್ಯ ಮರೆಮಾಚಲಾಗಿದೆ. ಪತ್ರವನ್ನು ಉದ್ದೇಶ ಪೂರ್ವಕವಾಗಿ ಬರೆದಂತೆ ಕಾಣುತ್ತಿದೆ. ಅವರ ಸಾವಿನ ಕುರಿತು ಸರಕಾರ ಉನ್ನತ ತನಿಖೆ ನಡೆಸಬೇಕು. ಹಗರಣಗಳನ್ನು ಬಹಿರಂಗಪಡಿಸಿ ಅವರ ಸಾವಿನ ಸತ್ಯವನ್ನು ಹೊರತರುವಲ್ಲಿ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News