ಬಳ್ಳಾರಿ: ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ
Update: 2019-08-01 22:01 IST
ಬಳ್ಳಾರಿ, ಆ.1: ತಾಯಿಯೊಬ್ಬಳು ತನ್ನ ಮಕ್ಕಳನ್ನು ಕೊಂದು ತಾನೂ ಅತ್ಮಹತ್ಯೆಗೆ ಈಡಾಗಿರುವ ಘಟನೆ ಇಲ್ಲಿನ ಮೇದಾರ ಕೇತಯ್ಯ ನಗರದಲ್ಲಿ ನಡೆದಿದೆ. ನಗರದ ನಿವಾಸಿ ಲಕ್ಷ್ಮಿ(25), ಮಕ್ಕಳಾದ ಉದಯ್(3) ಮತ್ತು ಭೂಮಿಕಾ(1.5 ವರ್ಷ) ಮೃತಪಟ್ಟವರು.
ಗುರುವಾರ ತಾಯಿ ತನ್ನ ಮಕ್ಕಳನ್ನು ತಮ್ಮ ಮನೆಯ ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಂದಿದ್ದಾಳೆ. ನಂತರ ತಾನೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈಕೆಯ ಪತಿ ವೀರೇಶ್, ಕಟ್ಟಡ ನಿರ್ಮಾಣ ಮೇಸ್ತ್ರಿ ವೃತ್ತಿ ಮಾಡುತ್ತಿದ್ದಾನೆ. ಪ್ರಕರಣ ಸಂಬಂಧ ಆತನನ್ನು ವಶಕ್ಕೆ ಪಡಿದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕೌಲ್‌ಬಝಾರ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.