×
Ad

ಮಲೆಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಪೂಜೆ

Update: 2019-08-01 23:42 IST

ಹನೂರು: ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮವಾಸ್ಯೆ ಪ್ರಯುಕ್ತ ಪೂಜಾ ಕೈಂಕರ್ಯಗಳು ವಿಧಿ ವಿಧಾನಗಳೊಂದಿಗೆ ಸಡಗರ ಸಂಭ್ರಮದಿಂದ  ನಡೆಯಿತು.

ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದರಿಂದ ಪ್ರಾಧಿಕಾರವು ಅಲ್ಲಲ್ಲಿ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲಸೌಲಭ್ಯವನ್ನು ಕಲ್ಪಿಸಿತ್ತು. ಅಲ್ಲದೆ ಎರಡು ಕಡೆ ಪ್ರತ್ಯೇಕ ದಾಸೋಹದ ವ್ಯವಸ್ಥೆ ಮಾಡಿತ್ತಲ್ಲದೆ, ಹರಕೆ ಹೊತ್ತ ಭಕ್ತರು ಅಲ್ಲಲ್ಲಿ ಅನ್ನದಾನ ಮಾಡುವ ಮೂಲಕ ತಮ್ಮ ಕಾಣಿಕೆ ಸಲ್ಲಿಸಿದರು.

ಭೀಮನ ಅಮವಾಸ್ಯೆ ಹಿನ್ನಲೆ ಜಾತ್ರೆಗೆ ಎರಡು ದಿನಗಳ ಮುನ್ನವೇ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಬುಧವಾರ ರಾತ್ರಿ ರಂಗಮಂದಿರ ಮುಂಭಾಗ ಮಹದೇಶ್ವರ ಭಕ್ತಗೀತೆಗಳನ್ನು ಹಾಡಿದರು.

ಪ್ರಾಧಿಕಾರವು ಅಪಾರಧ ಕೃತ್ಯಗಳನ್ನು ತಡೆಗಟ್ಟಲು ಕ್ಷೇತ್ರದಾದ್ಯಂತ ಸಿಸಿ ಕ್ಯಾಮಾರವನ್ನು ಅಳವಡಿಸಿತ್ತು, ಅಲ್ಲದೆ ಹೆಚ್ಚಿನ ಭದ್ರತೆಗಾಗಿ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಿಂದ ಹಾಗೂ ಜಿಲ್ಲೆಯ ವಿವಿಧ ಠಾಣೆಗಳಿಂದ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News