ಉಪ ಚುನಾವಣೆ ಘೋಷಣೆಗೆ ಮೊದಲೇ 'ಕೈ' ವೀಕ್ಷಕರ ನೇಮಕ: ಅನರ್ಹರ ವಿರುದ್ಧ ಸಮರ್ಥ ಅಭ್ಯರ್ಥಿಗಳಿಗೆ ಹುಡುಕಾಟ

Update: 2019-08-02 14:55 GMT

ಬೆಂಗಳೂರು, ಆ. 2: ರಾಜೀನಾಮೆ ನೀಡಿ ಅನರ್ಹಗೊಂಡ ಅತೃಪ್ತರ ಶಾಸಕರ ಕ್ಷೇತ್ರಗಳ ಗೆಲುವಿಗೆ ಪಣತೊಟ್ಟಿರುವ ಕಾಂಗ್ರೆಸ್, 17 ಕ್ಷೇತ್ರಗಳ ಉಪಚುನಾವಣೆ ಘೋಷಣೆಗೆ ಮೊದಲೇ ರಣತಂತ್ರ ರೂಪಿಸಲು ವೀಕ್ಷಕರನ್ನು ನೇಮಕ ಮಾಡಿದೆ.

ಆಯ್ಕೆಯಾಗಿ ಪಕ್ಷದ ವಿರುದ್ಧವೇ ನಿಂತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡ, ಉಚ್ಚಾಟಿತ ಶಾಸಕರ ವಿರುದ್ಧ ಸಮರ್ಥ ಅಭ್ಯರ್ಥಿಗಳನ್ನು ಹುಡುಕಲು ಹಾಗೂ ಉಪ ಚುನಾವಣೆ ಗೆಲುವಿನ ದೃಷ್ಟಿಯಿಂದ ಕಾಂಗ್ರೆಸ್ ಹಿರಿಯ ಮುಖಂಡರನ್ನು ವೀಕ್ಷಕರನ್ನು ನೇಮಿಸಿದೆ.

ಅಥಣಿ-ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್, ಕಾಗವಾಡ-ಸತೀಶ್ ಜಾರಕಿಹೊಳಿ, ಗೋಕಾಕ್-ಶಿವಾನಂದ ಪಾಟೀಲ್, ಮಸ್ಕಿ-ಈಶ್ವರ್ ಖಂಡ್ರೆ, ಯಲ್ಲಾಪುರ-ಆರ್.ವಿ.ದೇಶಪಾಂಡೆ, ಹಿರೇಕೆರೂರು-ಎಚ್.ಕೆ.ಪಾಟೀಲ್, ರಾಣೆಬೆನ್ನೂರು-ಝಮೀರ್ ಅಹ್ಮದ್ ಖಾನ್, ವಿಜಯನಗರ- ಬಸವರಾಜ ರಾಯರೆಡ್ಡಿ, ಚಿಕ್ಕಬಳ್ಳಾಪುರ-ಶಿವಶಂಕರ್ ರೆಡ್ಡಿ.

ಕೆ.ಆರ್.ಪುರ-ಕೆ.ಜೆ.ಜಾರ್ಜ್, ಯಶವಂತಪುರ-ಎಂ.ಕೃಷ್ಣಪ್ಪ, ರಾಜರಾಜೇಶ್ವರಿ ನಗರ-ಡಿ.ಕೆ.ಸುರೇಶ್, ಹೊಸಕೋಟೆ-ಕೃಷ್ಣಬೈರೇಗೌಡ, ಶಿವಾಜಿನಗರ- ಯು.ಟಿ. ಖಾದರ್, ಮಹಾಲಕ್ಷ್ಮಿ ಲೇಔಟ್- ಡಾ.ಜಿ.ಪರಮೇಶ್ವರ್, ಕೆ.ಆರ್.ಪೇಟೆ- ಚಲುವರಾಯಸ್ವಾಮಿ ಹಾಗೂ ಹುಣಸೂರು ಕ್ಷೇತ್ರಕ್ಕೆ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ವೀಕ್ಷಕರನ್ನಾಗಿ ನೇಮಿಸಿ ಕಾಂಗ್ರೆಸ್ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News