×
Ad

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ: ಆ.6ಕ್ಕೆ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷಾ ಫಲಿತಾಂಶ

Update: 2019-08-03 21:44 IST

ಬೆಂಗಳೂರು, ಆ.3: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಇತರೆ ಪರೀಕ್ಷೆಗಳು) ವತಿಯಿಂದ ಮೇ 2019ರಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳ ಫಲಿತಾಂಶವನ್ನು ಆ.6 ರಂದು ಬೆಳಗ್ಗೆ 10ಕ್ಕೆ ರಾಜ್ಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪ್ರಕಟಿಸಲಾಗುವುದು.

ಫಲಿತಾಂಶವನ್ನು ಮಂಡಳಿಯ ವೆಬ್‌ಸೈಟ್ www.kseeb.kar.nic.in ವಿಳಾಸದಲ್ಲಿ ಆ.5ರಂದು ಮಧ್ಯಾಹ್ನ 12ರ ನಂತರ ವೀಕ್ಷಿಸಬಹುದು. ಉತ್ತರಪತ್ರಿಕೆ ಛಾಯಾಪ್ರತಿ ಮತ್ತು ಅಂಕಗಳ ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆ.14 ಕೊನೆಯ ದಿನವಾಗಿರುತ್ತೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News