ಸಾ.ರಾ.ಮಹೇಶ್ ಜೊತೆ ಬಹಿರಂಗ ಚರ್ಚೆಗೆ ಸಿದ್ದ: ಅನರ್ಹ ಶಾಸಕ ಎಚ್.ವಿಶ್ವನಾಥ್

Update: 2019-08-04 14:41 GMT

ಮೈಸೂರು, ಜು.ಆ: ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ವಿಷವುಣಿಸಿದ ಕೀರ್ತಿ ಪುರುಷ ಸಾ.ರಾ.ಮಹೇಶ್ ಎಂದು ಆರೋಪಿಸಿದ ಅಡಗೂರು ಎಚ್.ವಿಶ್ವನಾಥ್ ಅವರು, ಸಾ.ರಾ.ಮಹೇಶ್ ಜತೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಪಂಥ್ವಾಹಾನ ನೀಡಿದರು.

ಕುಮಾರಸ್ವಾಮಿ ಅವರಿಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ಸರ್ಕಾರ ಪತನಕ್ಕೂ ಕಾರಣರಾದರು. ಸಾ.ರಾ.ಮಹೇಶ್ ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ಬಹಿರಂಗವಾಗಿ ಚರ್ಚಿಸಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

ಸಾರ್ವಭೌಮ ಸದನದಲ್ಲಿ ನನ್ನ ಗೈರು ಹಾಜರಿಯಲ್ಲಿ ಅಪ್ರಬುದ್ಧ ಮಂತ್ರಿಯಾಗಿದ್ದ ಸಾ.ರಾ.ಮಹೇಶ್ ಆರೋಪ ಮಾಡಿದರು. ಇದು ಸದನದ ಕಾನೂನಿಗೆ ವಿರುದ್ಧವಾದದ್ದು. ಸಾ.ರಾ.ಮಹೇಶ್ ಅವರು ಸಭೆ, ಸಾರ್ವಜನಿಕರನ್ನು ಮೆಚ್ಚಿಸಲು ಅಪ್ಪನಾಣೆ, ಮಕ್ಕಳಾಣೆ ಮಾಡಿದರು. ಇದೇನಾ ರಾಜಕಾರಣದ ಸಂಸ್ಕೃತಿ. ಇವರ ಮಾತುಗಳನ್ನು ಕೇಳಿ ಮನಸ್ಸಿಗೆ ಬಹಳ ನೋವಾಯಿತು. ರಾಜಕಾರಣ ನಡೆಯೋದು ನಂಬಿಕೆ ಮೇಲೆ. ಸಾಲ ಮಾಡಿಕೊಂಡಿರುವ ಬಗ್ಗೆ ಕುಮಾರಸ್ವಾಮಿ ಅವರಿಗೆ ಹೇಳಿದ್ದು ನಿಜ. ಈ ವಿಚಾರವಾಗಿ ಸಾ.ರಾ.ಮಹೇಶ್ ಅವರ ತೋಟದಲ್ಲಿ ಮಾತನಾಡಿದ್ದು ಉಂಟು. ಮೈಸೂರಿನ ಪತ್ರಕರ್ತರೊಬ್ಬರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವಿಶ್ವನಾಥ್ 26 ಕೋಟಿಗೆ ಮಾರಿಕೊಂಡರು ಎಂದು ಅಪಪ್ರಚಾರ ಮಾಡಲಾಯಿತು ಎಂದರು.

ಎಚ್.ವಿಶ್ವನಾಥ್ ಅವರ ಪತ್ರಿಕಾಗೋಷ್ಠಿ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದ ಸುತ್ತಮುತ್ತ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ವಿಶ್ವನಾಥ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ತ್ಯಾಗರಾಜ ರಸ್ತೆಯಲ್ಲಿ ನಿಂತಿದ್ದ ಜನರನ್ನು ವಿಶ್ವನಾಥ್ ಅವರು ಭೇಟಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News