ಹನೂರು: ನೀರಿನಲ್ಲಿ ಮುಳುಗಿ ಯುವಕ ಮೃತ್ಯು

Update: 2019-08-04 14:46 GMT

ಹನೂರು, ಆ.4: ಮಲೆಮಹದೇಶ್ವರ ಬೆಟ್ಟದ ಅಂತರಗಂಗೆಯ ಸಮೀಪ ಇರುವ ಡ್ಯಾಂನಲ್ಲಿ ಯುವಕನೋರ್ವ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮೃತ ಯುವಕನನ್ನು ಬೆಂಗಳೂರು ಮೂಲದ ಜಯನಗರದ ಪ್ರಭು ಎಂದು ಗುರುತಿಸಲಾಗಿದೆ. 

ಬೆಂಗಳೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ 9 ಮಂದಿ ಗೆಳೆಯರು ಬೆಟ್ಟದ ಅಂತರಗಂಗೆಯ ಬಳಿಯಿರುವ ಜಲಾಶಯದಲ್ಲಿ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಪ್ರಭು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News